ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಉಪ್ಪಿನಕಾಯಿ, ಪಲ್ಯಗಳು ತಿಂದು ಬೋರಾಗಿದ್ಯಾ..ಹಾಗಿದ್ರೆ ಆಂಧ್ರ ಶೈಲಿಯ ಈ ಕರಿಬೇವಿನ ಪಚ್ಚಡಿ,ಉಪ್ಪಿನಕಾಯಿ ಟ್ರೈ ಮಾಡಿ ತಿನ್ನೋಕು ರುಚಿ ಹಾಗೆಯೇ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಪದಾರ್ಥಗಳು
50 ಗ್ರಾಂ ಕರಿಬೇವಿನ ಎಲೆ
90-100 ಗ್ರಾಂ ಹುಣಸೆಹಣ್ಣು
100 ಗ್ರಾಂ ಹಸಿ ಮೆಣಸಿನಕಾಯಿ
2 ಟೀಸ್ಪೂನ್ ಉಪ್ಪು
1/4 ಕಪ್ ಎಣ್ಣೆ
1 ಟೀಸ್ಪೂನ್ ಸಾಸಿವೆ
1/4 ಟೀಸ್ಪೂನ್ ಮೆಂತ್ಯ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಉದ್ದಿನ ಬೇಳೆ
1 ಟೀಸ್ಪೂನ್ ಕಡಲೆಬೇಳೆ
2 ಟೀಸ್ಪೂನ್ ಕೊತ್ತಂಬರಿ ಬೀಜ
10 ಬೆಳ್ಳುಳ್ಳಿ
1/2 ಟೀಸ್ಪೂನ್ ಅರಿಶಿನ
ಮಾಡುವ ವಿಧಾನ:
ಒಂದು ಬಾಣಲೆಗೆ 1/4 ಕಪ್ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಮೆಂತ್ಯೆ ಹಾಕಿ ಕಲರ್ ಬರುವವರೆಗೆ ಹುರಿಯಿರಿ. ಬಳಿಕ ಕಡಲೆಬೇಳೆ, ಉದ್ದಿನಬೇಳೆ ಹಾಕಿ ಮತ್ತೊಮ್ಮೆ ಎಣ್ಣೆಯಲ್ಲಿ ಹುರಿದು ಅದಕ್ಕೆ ಕೊತ್ತಂಬರಿ ಬೀಜ ಹಾಕಿ ಐದು ನಿಮಿಷ ಹುರಿದುಕೊಳ್ಳಿ. ಬಳಿಕ ಅದಕ್ಕೆ ಹಸಿಮೆಣಸಿನಕಾಯಿಹಾಕಿ ಚೆನ್ನಾಗಿ ಬೇಯಿಸಿ.ಕೊನೆಗೆ ಕರಿಬೇವಿನ ಎಲೆ ಹಾಕಿ ಐದು ನಿಮಿಷಗಳ ಕಾಲ ಹುರಿದುಕೊಳ್ಳಿ. ತಣಿದ ಬಳಿಕ ಹುರಿದ ಪದಾರ್ಥಗಳನ್ನು ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿ. ಅದೇ ಬಾಣಲೆಗೆ ಹುಸಣೆಹಣ್ಣಿನ ರಸ ತೆಗೆದು ಅದರೊಟ್ಟಿಗೆ ಸ್ವಲ್ಪ ಬೆಲ್ಲ ಹಾಕಿ ಬೆಲ್ಲ ಕರಗುವವರೆಗೆ ಕೈಯಾಡಿಸುತ್ತಾ ಅದಕ್ಕೆ ಬೆಳ್ಳುಳ್ಳಿ ಹಾಕಿ ಕುದಿಸಿ. ಮಿಶ್ರಣ ಹದಕ್ಕೆ ಬಂದ ಮೇಲೆ ಮಿಕ್ಸಿ ಮಾಡಿದ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಕೊನೆಗೆ ಅರಿಶಿನ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬೇಕಾದ್ರೆ ಒಗ್ಗರಣೆ ಕೊಡಬಹುದು ಅದು ನಿಮ್ಮ ಆಯ್ಕೆ. ಹೀಗೆ ತಯಾರು ಮಾಡಿದ ಪಚ್ಚಡಿ ಸುಮಾರು ಎರಡು ತಿಂಗಳವರೆಗೆ ಬರುತ್ತದೆ.