May 19, 2026
Tuesday, May 19, 2026
spot_img

ಆಂಧ್ರ ಡಿಸಿಎಂ ಪವನ್​ ಕಲ್ಯಾಣ್ ಗೆ ತುರ್ತು ಶಸ್ತ್ರಚಿಕಿತ್ಸೆ: ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್ ಅವರು ದಿಢೀರ್ ತುರ್ತು ಶಸ್ತ್ರಚಿಕಿತ್ಸೆ ಒಳಪಟ್ಟಿದ್ದು, ಸದ್ಯ ಅವರ ಅರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಪವನ್ ಕಲ್ಯಾಣ್ ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿದ್ದು, ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

ಈ ಕುರಿತು ಖುದ್ದು ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರೊಂದಿಗೆ ಇಂದು ನಾನು ಮಾತುಕತೆ ನಡೆಸಿದ್ದು, ಅವರ ಆರೋಗ್ಯದ ಕುರಿತು ವಿಚಾರಿಸಿದ್ದೇನೆ. ಪವನ್ ಸಾಹಸ ವ್ಯಕ್ತಿಯಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಅವರ ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಪ್ರಧಾನಿ ಕರೆಗೆಗೆ ಧನ್ಯವಾದ ಅರ್ಪಿಸಿದ ಪವನ್ ಕಲ್ಯಾಣ್, ನನ್ನ ಆರೋಗ್ಯದ ಕುರಿತು ಕಾಳಜಿ ವಹಿಸಿ ವಿಚಾರಿಸಿದಕ್ಕೆ ಧನ್ಯವಾದಗಳು. ನಿಮ್ಮ ಹಾರೈಕೆ, ಬೆಂಬಲ ನನ್ನ ಚೇತರಿಕೆಗೆ ಹೆಚ್ಚಿನ ಬಲ ನೀಡಲಿದ್ದು, ಸದಾ ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದರು.

ಇತ್ತ ಪ್ರಧಾನಿ ಮೋದಿ ಮಾತ್ರವಲ್ಲದೆ ಜೂನಿಯರ್ ಎನ್​ಟಿಆರ್ ಸಹಿತ ರಾಜಕೀಯ, ಸಿನಿಮಾ ರಂಗದ ಗಣ್ಯರು ​ಉತ್ತಮ ಆರೋಗ್ಯಕ್ಕೆ ಹಾರೈಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !