ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ಕ್ಷೇತ್ರದಲ್ಲಿ ವೈಸಿಪಿ ನಾಯಕರ ನಡುವಿನ ಬಣ ಜಗಳ ತಾರಕಕ್ಕೇರಿದೆ. ವೈಸಿಪಿಯ ಭಿನ್ನಮತೀಯ ನಾಯಕರ ನಡುವಿನ ಸಂಘರ್ಷದ ವಾತಾವರಣ ಗೊಂದಲಕ್ಕೆ ಕಾರಣವಾಗುತ್ತಿದೆ. ಪೆನುಕೊಂಡ ಕ್ಷೇತ್ರದ ವೈಸಿಪಿ ಮುಖಂಡರು ಎರಡು ಬಣಗಳಾಗಿ ಒಡೆದಿದ್ದಾರೆ. ಒಂದು ಗುಂಪು ಜಗನ್ ಪರ, ಶಂಕರ್ ನಾರಾಯಣ ವಿರೋಧಿ ಘೋಷಣೆಗಳು ಬರುತ್ತಿವೆ. ಇನ್ನೊಂದು ಗುಂಪು ‘ಧರ್ಮಾವರಂ ನಾಯಕತ್ವ ಬೇಡ… ಪೆನುಕೊಂಡ ನಾಯಕತ್ವ ಬೇಕು’ ಅಂತಿದಾರೆ. ಇದೀಗ ಈ ಗಲಾಟೆ ತಾರಕಕ್ಕೇರಿ ಮಾಜಿ ಸಚಿವ ಶಂಕರ ನಾರಾಯಣ ಹಾಗೂ ಸಂಸದ ಗೋರಂಟ್ಲ ಮಾಧವ್ ಅವರ ವಾಹನದ ಚಪ್ಪಲಿ ತೂರಾಟ ನಡೆದಿದೆ.
ಮತ್ತೊಂದೆಡೆ ವೈಸಿಪಿ ಸಾಮಾನ್ಯ ಸಭೆಗೆ ಆಗಮಿಸಿದ್ದ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಅವರನ್ನು ಭಿನ್ನಮತೀಯ ಮುಖಂಡರು ಪ್ರತಿಭಟನಾ ಮೆರವಣಿಗೆ ಬಿಸಿ ತಟ್ಟಿತು. ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಅವರ ವಾಹನವನ್ನು ವೈಸಿಪಿ ಭಿನ್ನಮತೀಯ ಮುಖಂಡರು ತಡೆದ ಕಾರಣ ಅವರ ವಾಹನ ಅರ್ಧ ಗಂಟೆ ರಸ್ತೆಯಲ್ಲೇ ನಿಂತಿತ್ತು.
ಪೊಲೀಸರು ಭಿನ್ನಮತೀಯ ಮುಖಂಡರನ್ನು ತಡೆಯಲು ಯತ್ನಿಸಿದ ವೇಳೆ ಭಿನ್ನಮತೀಯ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೆನುಕೊಂಡ ಸಭೆಗೆ ಸಚಿವ ಪೆದ್ದಿರೆಡ್ಡಿಯನ್ನು ಪೊಲೀಸರು ಬೇರೆ ಮಾರ್ಗದಲ್ಲಿ ಕರೆದೊಯ್ದರು. ಭಿನ್ನಮತೀಯ ನಾಯಕರ ಬಗ್ಗೆ ಸಚಿವ ಪೆದ್ದಿರೆಡ್ಡಿ ಸೀರಿಯಸ್ ಆಗಿದ್ದಾರೆ.