ಸಮುದ್ರದಲೆಗಳಿಂದ ವಿದ್ಯುತ್ -‌ ಐಐಟಿ ಮದ್ರಾಸ್‌ ಸಹಯೋಗದಲ್ಲಿ ವಿಶಾಖಪಟ್ಟಣದ ನವೋದ್ದಿಮೆಯ ವಿನೂತನ ಪ್ರಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗಾಳಿಯಿಂದ, ನೀರಿನಿಂದ, ಸೂರ್ಯನಿಂದ ವಿದ್ಯುತ್‌ ಉತ್ಪಾದಿಸುವುದರೆ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಇಲ್ಲೊಂದ ನವೋದ್ದಿಮೆಯು ಸಮುದ್ರದಲೆಗಳ ಶಕ್ತಿಯಿಂದ ವಿದ್ಯುತ್‌ ತಯಾರಿಸಲು ಹೊರಟಿದೆ. ಹೌದು, ವಿಶಾಖಪಟ್ಟಣ ಮೂಲದ ನವೋದ್ದಿಮೆಯೊಂದು ಐಐಟಿ ಮದ್ರಾಸ್‌ ನ ಸಹಯೋಗದೊಂದಿಗೆ ಹೀಗೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಕುರಿತು ಐಐಟಿ ಮದ್ರಾಸ್‌ ನೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ.

Virya Paramita Energy (VPE) ಎಂಬ ಸ್ಟಾರ್ಟಪ್‌ ನವೀಕರಿಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಲು ಈ ಒಪ್ಪಂದ ಮಾಡಿಕೊಂಡಿದ್ದು ಸಮುದ್ರದಲೆಗಳ ಮೂಲಕ ವಿದ್ಯುತ್‌ ಉತ್ಪಾದಿಸಲು ಸಿದ್ಧವಾಗಿದೆ. ತಂಡವು ಅಲೆಗಳಿಂದ ಶಕ್ತಿಯನ್ನು ಉತ್ಪಾದಿಸಲು ಸಿಂಧೂಜಾ-1 ಹೆಸರಿನ ‘ಸಮುದ್ರದಲೆಗಳ ಶಕ್ತಿ ಪರಿವರ್ತಕ’ ಸಾಧನವನ್ನು ರಚಿಸಿದೆ. ಇದು ಸಮುದ್ರದಲೆಗಳ ಮೇಲೆ ತೇಲುವ ಸಾಧನವಾಗಿದ್ದು ಬಲೂನಿನಂತಹ ವಿನ್ಯಾಸ ಹೊಂದಿದೆ. ಅವುಗಳ ಮಧ್ಯದಲ್ಲಿ ಒಂದು ರಾಡ್‌ ಅಳವಡಿಸಲಾಗಿದ್ದು ಅದನ್ನು ಸಮುದ್ರ ತಳಕ್ಕೆ ಸಂಪರ್ಕಿಸಲಾಗುತ್ತದೆ. ಅಲೆಯು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುವಾಗ ಸಾಧನವೂ ಕೂಡ ಮೇಲೆ ಕೆಳಗೆ ಚಲಿಸುತ್ತದೆ. ಇದು ಜನರೇಟರ್‌ ಚಲಿಸಲು ಅಗತ್ಯವಿರುವ ಸಂಬಂಧಿತ ಚಲನೆಯನ್ನು ನೀಡಿ ವಿದ್ಯುತ್‌ ಉತ್ಪಾದನೆಗೆ ಸಹಕಾರಿಯಾಗಲಿದೆ.

ಈ ಹಿಂದೆ ತಂಡವು ಪ್ರಾಯೋಗಿಕವಾಗಿ ತಮಿಳುನಾಡಿನ ತೂತುಕುಡಿ ಕರಾವಳಿಯಿಂದ ಆರು ಕಿಲೋಮೀಟರ್ ದೂರದಲ್ಲಿ 20 ಮೀಟರ್‌ ಆಳದಲ್ಲಿ ಸಾಧನವನ್ನು ನಿಯೋಜಿಸಿ ಯಶಸ್ವಿಯಾಗಿದೆ ಮೊದಲ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶಗಳ ನಂತರ, 2025 ರ ವೇಳೆಗೆ ವಾಣಿಜ್ಯ ಉದ್ದೇಶಗಳಿಗಾಗಿ ಅಲೆಗಳಿಂದ ಒಂದು MW ವಿದ್ಯುತ್ ಉತ್ಪಾದಿಸುವ ಗುರಿಯನ್ನು ಈ ನವೋದ್ದಿಮೆ ಹೊಂದಿದೆ. ಚೆನ್ನೈನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‌ಐಒಟಿ) ಯಿಂದ ತಂಡವು ನೆರವು ಪಡೆಯುತ್ತಿದೆ.

ಸಾಗರದ ಅಲೆಗಳು ದಿನದ 24 ಗಂಟೆಗಳು, ವಾರದ ಏಳು ದಿನಗಳು ಕನಿಷ್ಠ ಬ್ಯಾಟರಿ ಸಂಗ್ರಹಣೆಯೊಂದಿಗೆ ವಿದ್ಯುತ್ ಉತ್ಪಾದಿಸಬಹುದಾದ ಸಾಮರ್ಥ್ಯ ಹೊಂದಿವೆ. ಸಮುದ್ರದಲ್ಲಿ ಭೀಕರ ಅಲೆಗಳು, ಸೈಕ್ಲೋನ್‌, ಯಂತ್ರದ ಮೇಲೆ ಸಮುದ್ರಪಾಚಿ ಬೆಳವಣಿಗೆ ಇತ್ಯಾದಿ ಕೆಲ ಸಮಸ್ಯೆಗಳಿದ್ದರೂ ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಅಭಿವೃದ್ಧಿ ಸಾಧಿಸಬಹುದು ಎಂದು ತಂಡ ಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!