ಅಂಗನವಾಡಿ ಕೇಂದ್ರದಿoದ ಅಕ್ರಮವಾಗಿ ಹಾಲಿನ ಪೌಡರ್‌ ಸಾಗಾಟ: ಸಿಕ್ಕಿ ಬಿದ್ದ ಖದೀಮ

ಹೊಸದಿಗಂತ ವರದಿ, ಮೈಸೂರು:

ಗರ್ಭಿಣಿಯರು ಹಾಗೂ ಬಾಣಂತಿಯರ ಪೌಷ್ಟಿಕತೆ ಹೆಚ್ಚಿಸಲು ಸರ್ಕಾರ ನೀಡುವ ಹಾಲಿನ ಫೌಡರ್‌ನ್ನು ಅಕ್ರಮವಾಗಿ ಅಂಗನವಾಡಿ ಕೇಂದ್ರದಿoದ ಸಾಗಿಸುವ ವೇಳೆ ಆರೋಪಿಯೊಬ್ಬ ಗ್ರಾಮಸ್ಥರಿಗೆ ಸಿಕ್ಕಿ ಬಿದ್ದಿರುವ ಘಟನೆ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಗರ್ಲೆ ಗ್ರಾಮದ ಜಗದೀಶ್ ಎಂಬಾತನೇ ಸಿಕ್ಕಿ ಬಿದ್ದ ಆರೋಪಿ. ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಈತನ ಬಳಿ ನೂರಾರು ಪ್ಯಾಕೆಟ್‌ಗಳು ಪತ್ತೆಯಾಗಿದೆ. ಮಡುವಿನಹಳ್ಳಿ ಗ್ರಾಮದ ಅಂಗನವಾಡಿಯ ಸಿಬ್ಬಂದಿ ಮಂಜುಳಾ ಎಂಬುವರು ಹಾಲಿನ ಪ್ಯಾಕೆಟ್ ಗಳನ್ನು ದಂಧೆಕೋರರಿಗೆ ತಲುಪಿಸಿರುವ ಮಾಹಿತಿಯನ್ನ ಈತ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
ನಂಜನಗೂಡು ತಾಲೂಕಿನಾದ್ಯಂತ ಈ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೂ ಪುರಾವೆಗಳಿಲ್ಲ ಸಬೂಬು ಹೇಳುತ್ತಿದ್ದರು. ಇದೀಗ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವುದರಿಂದ ಅಂಗನವಾಡಿ ಸಿಬ್ಬಂದಿಗಳು ದಂಧೆಕೋರರ ಜೊತೆ ಕೈ ಜೋಡಿಸಿರುವುದು ಬೆಳಕಿಗೆ ಬಂದಿದೆ.ತಾಲೂಕಿನ ವಿವಿದ ಅಂಗನವಾಡಿ ಕೇಂದ್ರಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಗರ್ಭಿಣಿಯರಿಗೆ ಬಾಣಂತಿಯರಿಗೆ ಸೇರಬೇಕಾದ ಹಾಲಿನ ಪೌಡರ್ ಪ್ಯಾಕೆಟ್ ಗಳು ಖಾಸಗಿ ವ್ಯಾಪಾರಸ್ಥರ ಕೈ ಸೇರುವ ದಂಧೆ ಈತನ ಮೂಲಕ ಬಟ್ಟಾ ಬಯಲಾಗಿದೆ.
ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಸಂಬAಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!