ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಿಕಾ ಸುರೇಂದ್ರನ್..ಮಲಯಾಳಂ ಮತ್ತು ತಮಿಳಿನ ಹಲವು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದರು. ಒಂದು ಕಾಲದಲ್ಲಿ ಬಾಲ ಕಲಾವಿದೆಯಾಗಿ ಸರಣಿ ಚಿತ್ರಗಳನ್ನು ಮಾಡಿದ್ದ ಅನಿಕಾ ಈಗ ಸೌತ್‌ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಮತ್ತು ನಾಯಕಿಯಾಗಿ ಸಿನಿಮಾ ಮಾಡುತ್ತಿದ್ದಾರೆ. ಅನಿಕಾ ಬುಟ್ಟಬೊಮ್ಮ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಸದ್ಯ ಮಲಯಾಳಂ ಮತ್ತು ತಮಿಳಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಧನುಷ್ ಚಿತ್ರದಲ್ಲಿ ಅನಿಕಾ ಸುರೇಂದ್ರನ್ ನಾಯಕಿಯಾಗಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಧನುಷ್ ಶೀಘ್ರದಲ್ಲೇ ಕ್ಯಾಪ್ಟನ್ ಮಿಲ್ಲರ್ ಚಿತ್ರದೊಂದಿಗೆ ಬರಲಿದ್ದಾರೆ. ಇದಾದ ನಂತರ ತಮ್ಮ 50ನೇ ಚಿತ್ರವನ್ನು ನಿರ್ದೇಶಿಸಲಿದ್ದು, ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಅನಿಕಾ ಸುರೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಈ ಸುದ್ದಿ ತಮಿಳು ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದರೊಂದಿಗೆ ಮಾಜಿ ಬಾಲ ಕಲಾವಿದೆ ಈಗ ನಾಯಕಿಯಾಗಿದ್ದು, ಸ್ಟಾರ್ ನಾಯಕನ ಜೊತೆ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ ಎಂಬ ಕಾಮೆಂಟ್‌ಗಳು ಕೇಳಿ ಬರುತ್ತಿವೆ.