Monday, January 30, 2023

Latest Posts

ಸಾಕ್ಷ್ಯ ಚಿತ್ರದ ಕುರಿತ ಅನಿಲ್ ಆಯಂಟೊನಿ ದೃಷ್ಟಿ ಅಪಕ್ವ: ಶಶಿ ತರೂರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಕುರಿತು ಬಿಬಿಸಿ ಹೊರತಂದಿರುವ ಸಾಕ್ಷ್ಯ ಚಿತ್ರದ ಕುರಿತ ಅನಿಲ್ ಆಯಂಟೊನಿ ದೃಷ್ಟಿ ಅಪಕ್ವವಾದದ್ದು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿತರೂರ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಎಕೆ ಆಯಂಟೊನಿ ಅವರ ಪುತ್ರ ಅನಿಲ್ ಕೆ ಆಯಂಟೊನಿಸಾಕ್ಷ್ಯಚಿತ್ರ ನಿರ್ಬಂಧವನ್ನು ಸಮರ್ಥಿಸಿಕೊಂಡಿದ್ದು, ಭಾರತದ ವಿರುದ್ಧ ಪೂರ್ವಾಗ್ರಹಗಳ ಸುದೀರ್ಘ ಇತಿಹಾಸ ಹೊಂದಿರುವ ಬಿಬಿಸಿ ಚಾನಲ್ ನ ಈ ಸಾಕ್ಷ್ಯ ಚಿತ್ರ ಭಾರತದ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು. ಬಳಿಕ ತಮ್ಮ ಅಭಿಪ್ರಾಯವನ್ನು ಹಾಗೂ ಟ್ವೀಟ್ ನ್ನು ವಾಪಸ್ ಪಡೆಯಬೇಕು ಎಂಬ ಒತ್ತಡ ಹೆಚ್ಚಾಗಿ ಅಸಮಾಧಾನಗೊಂಡ ಆಯಂಟೊನಿ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಬಿಬಿಸಿಯ ಡಾಕ್ಯುಮೆಂಟರಿಯನ್ನು ನೋಡಬೇಕೋ ನೋಡಬಾರದೋ ಎಂಬ ಆಯ್ಕೆಯ ಸ್ವಾತಂತ್ರ್ಯ ದೇಶದ ಜನಕ್ಕೆ ಇದೆ. ಯಾವುದೇ ವಿಷಯದ ಬಗ್ಗೆ ಡಾಕ್ಯುಮೆಂಟರಿ ಮಾಡುವ ಹಕ್ಕು ಬ್ರಿಟೀಶ್ ಪ್ರಸಾರ ಸಂಸ್ಥೆಗೆ ಇಲ್ಲ ಎಂದು ಯಾರು ಹೇಳಲು ಸಾಧ್ಯ? ಡಾಕ್ಯುಮೆಂಟರಿ ವೀಕ್ಷಿಸುವುದಕ್ಕೆ ದೇಶದ ಸಂವಿಧಾನ ಎಲ್ಲಾ ರೀತಿಯ ಹಕ್ಕನ್ನು ನೀಡಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!