ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲಿವುಡ್ ಥ್ರಿಲ್ಲರ್ ಮೂವಿ ಮಂಜುಮ್ಮೆಲ್ ಬಾಯ್ಸ್ ಸಹಾಯಕ ನಿರ್ದೇಶಕ ಅನಿಲ್ ಕ್ಸೇವಿಯರ್ (39) ಆಗಸ್ಟ್ 27 ರಂದು ನಿಧನರಾಗಿದ್ದಾರೆ.
ಫುಟ್ಬಾಲ್ ಆಡುತ್ತಿದ್ದಾಗ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಆ.27) ರಾತ್ರಿ ಸಾವನ್ನಪ್ಪಿದ್ದಾರೆ. ವೈದ್ಯರ ಪ್ರಕಾರ, ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅಂದಹಾಗೆ, ಮಂಜುಮ್ಮೆಲ್ ಬಾಯ್ಸ್, ಸಿನಿಮಾದ ಜೊತೆ ತಲ್ಲುಮಲ ಮತ್ತು ಥೇಕ್ಕು ವಡಕ್ಕು ಸೇರಿ ಅನೇಕ ಸಿನಿಮಾಗಳಲ್ಲಿ ಅನಿಲ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಇದೀಗ ಅವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.