September 21, 2026
Monday, September 21, 2026
spot_img

ಅನಿರುದ್ಧ್ ಬಿಜಿಎಂ, ವಿದ್ಯಾ ಖಡಕ್ ಲುಕ್: ‘ಜೈಲರ್ 2’ ಗ್ಲಿಂಪ್ಸ್ ನೋಡಿ ಫ್ಯಾನ್ಸ್ ಫುಲ್ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ‘ಜೇಲರ್’ ಸಿನಿಮಾದ ಪಾರ್ಟ್-2 ಹವಾ ಈಗ ಸಿಕ್ಕಾಪಟ್ಟೆ ಜೋರಾಗಿದೆ. ಸದ್ಯಕ್ಕೆ ಸಿನಿರಂಗದಲ್ಲಿ ‘ಜೇಲರ್ 2’ದ್ದೇ ಮಾತು. ಸಿನಿಮಾ ಟೀಮ್ ಅಂತೂ ದಿನಕ್ಕೊಂದು ಕ್ಯಾರೆಕ್ಟರ್ ಇಂಟ್ರೊಡಕ್ಷನ್ ವಿಡಿಯೋ ಬಿಟ್ಟು ಫ್ಯಾನ್ಸ್‌ಗೆ ಥ್ರಿಲ್ ಆಗೋ ಥರ ಮಾಡ್ತಿದೆ. ಭಾನುವಾರ ಸನ್ ಪಿಕ್ಚರ್ಸ್ ಸಂಸ್ಥೆಯವರು ಬಾಲಿವುಡ್‌ನ ಟ್ಯಾಲೆಂಟೆಡ್ ಆಕ್ಟ್ರೆಸ್, ವರ್ಸಟೈಲ್ ನಟಿ ವಿದ್ಯಾ ಬಾಲನ್ ಅವರ ಕ್ಯಾರೆಕ್ಟರ್ ಗ್ಲಿಂಪ್ಸ್ ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಈಗ ಈ ಪೋಸ್ಟ್ ಎಲ್ಲೆಡೆ ಸಖತ್ ಸೌಂಡ್ ಮಾಡ್ತಿದೆ.

ವಿದ್ಯಾ ಬಾಲನ್ ಮಾಸ್ ಅವತಾರ

ಈ ಸಿನಿಮಾದಲ್ಲಿ ವಿದ್ಯಾ ಬಾಲನ್ ಅವರು ‘ಕಾಂತಾ’ ಅನ್ನೋ ಪವರ್‌ಫುಲ್ ಕ್ಯಾರೆಕ್ಟರ್‌ನಲ್ಲಿ ಮಿಂಚಲಿದ್ದಾರೆ. ರಿಲೀಸ್ ಆಗಿರೋ ಸಣ್ಣ ವಿಡಿಯೋ ತುಣುಕಿನಲ್ಲಿ ಬ್ಲೂ ಕಲರ್ ಸೀರೆ ಉಟ್ಟು, ಮೆಟ್ಟಿಲು ಇಳಿದು ಬರೋ ಅವರ ಎಂಟ್ರಿನೇ ಒಂದು ರೇಂಜ್‌ಗಿದೆ. ಒಂದ್ಕೈಯಲ್ಲಿ ಸೀರೆ ಪಲ್ಲು ಹಿಡಿದು, ಇನ್ನೊಂದ್ಕೈಯಲ್ಲಿ ಸಿಗರೇಟ್ ಹಿಡ್ಕೊಂಡು ಆಟಿಟ್ಯೂಡ್ ತೋರಿಸೋ ವಿದ್ಯಾ ಅವರ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅದಕ್ಕೆ ತಕ್ಕಂತೆ ಅನಿರುದ್ಧ್ ರವಿಚಂದರ್ ಅವರ ಬಿಜಿಎಮ್‌ ಅಂತೂ ಎದೆ ಝಲ್ ಎನ್ನಿಸೋ ಹಾಗಿದೆ.

ಡೈರೆಕ್ಟರ್ ನೆಲ್ಸನ್ ದಿಲೀಪ್‌ಕುಮಾರ್ ಈ ಬಾರಿ ಪಕ್ಕಾ ಪ್ಲಾನ್ ಮಾಡ್ಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ರಜನಿಕಾಂತ್ ಅವರು ಮತ್ತೆ ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಆಗಿ ಧೂಳೆಬ್ಬಿಸಲಿದ್ದು, ಮೊದಲ ಭಾಗದಲ್ಲಿದ್ದ ರಮ್ಯಾ ಕೃಷ್ಣನ್ ಹಾಗೂ ಯೋಗಿ ಬಾಬು ಕೂಡ ಈ ಸೀಕ್ವೆಲ್‌ನಲ್ಲಿ ಇದ್ದಾರೆ.

ಸರ್ಪ್ರೈಸ್ ಕ್ಯಾಮಿಯೋ ಇದ್ಯಾ?

ಈ ಪಿಕ್ಚರ್‌ನಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, ಮೋಹನ್‌ಲಾಲ್, ಮಿಥುನ್ ಚಕ್ರವರ್ತಿ, ವಿಜಯ್ ಸೇತುಪತಿ ಮತ್ತು ಹೃತಿಕ್ ರೋಷನ್ ಕೂಡ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಳ್ತಾರಂತೆ. ಇದನ್ನ ಡೈರೆಕ್ಟರ್ ಸರ್ಪ್ರೈಸ್ ಆಗಿ ಇಡ್ತಾರಾ ಅಥವಾ ರಿಲೀಸ್‌ಗೂ ಮುಂಚೆನೇ ಹೇಳ್ತಾರಾ ಎಂದು ಕಾದು ನೋಡಬೇಕು.

ಮೊದಲ ಭಾಗ ‘ಜೇಲರ್’ ವರ್ಲ್ಡ್‌ವೈಡ್ ಬರೊಬ್ಬರಿ 607 ಕೋಟಿ ರೂಪಾಯಿಗೂ ಹೆಚ್ಚು ಬಿಸಿನೆಸ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಎಲ್ಲಾ ಲ್ಯಾಂಗ್ವೇಜ್‌ನಲ್ಲೂ ಜನರು ಮುಗಿಬಿದ್ದು ನೋಡಿದ್ರು. ಈಗ ‘ಜೇಲರ್ 2’ ಕೂಡ ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಅಕ್ಟೋಬರ್ 15, 2026ರಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಅನಿರುದ್ಧ್ ಮ್ಯೂಸಿಕ್ ಜೊತೆ ತಲೈವಾ ಮಾಸ್ ಆಕ್ಷನ್ ನೋಡೋಕೆ ಇಡೀ ಸಿನಿಮಾ ಪ್ರೇಮಿಗಳು ಕಾದು ಕೂತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !