ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರ ಮನೆ ಮೇಲೆ ದಾಳಿಕೋರರು ದಾಳಿ ನಡೆಸಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. 18-20 ವರ್ಷ ವಯಸ್ಸಿನ ಹುಡುಗರು ನನ್ನನ್ನು ಹೊಡೆಯಲು ಯೋಜಿಸುತ್ತಿದ್ದರು.
ಆರಂಭದಲ್ಲಿ ದುಷ್ಕರ್ಮಿಗಳ ತಂಡ ಅಂಜುಮನ್ ಕಚೇರಿ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಆದರೆ ಅಲ್ಲಿ ಇಸ್ಮಾಯಿಲ್ ಪತ್ತೆಯಾಗಿರಲಿಲ್ಲ. ಹೀಗಾಗಿ ಮನೆಗೆ ನುಗ್ಗಿದ್ದಾರೆ. ಇಸ್ಮಾಯಿಲ್ ಇಲ್ಲದ ಕಾರಣ ಮನೆಯವರೊಂದಿಗೆ ಜಗಳವಾಡಿದ್ದಾರೆ.
ಪ್ರಸ್ತುತ ಘಟನೆ ಕುರಿತು ಧಾರವಾಡದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮುಸ್ಲಿಂ ಹುಡುಗರಿಂದಲೇ ಮುಸ್ಲಿಂ ನಾಯಕರನ್ನು ಹತ್ಯೆ ಮಾಡುವ ಯೋಜನೆ ಇದಾಗಿದೆ. ಅವರು ನಮ್ಮ ಜೀವಕ್ಕೆ ಬೆದರಿಕೆ ಹಾಕುತ್ತಾರೆ. ಮಣಕಿಲ್ಲಾ, ರಸೂಲಪುರ ಗಲ್ಲಿಯಲ್ಲಿ ಚಾಕು ಹಿಡಿದುಕೊಂಡು ನಿನ್ನೆ ಓಡಾಡಿದ್ದಾರೆ. ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಮೇಲೆ ನಂಬಿಕೆ ಇದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಹೇಳಿದ್ದಾರೆ.