October 15, 2026
Thursday, October 15, 2026
spot_img

ಅಂಕೋಲಾ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ಬಲೆಗೆ

ಹೊಸದಿಗಂತ ವರದಿ ಉತ್ತರಕನ್ನಡ:

ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ವ್ಯಕ್ತಿಯನ್ನು ಅಂಕೋಲಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಪಟ್ಟಣದ ಕಾಕರಮಠ ನಿವಾಸಿ ಇಸ್ಮಾಯಿಲ್ ಹುಸೇನ ಶೇಖ(32) ಬಂಧಿತ ಆರೋಪಿಯಾಗಿದ್ದು ಈತ ಗೋಖಲೆ ಕಾಲೇಜ್ ಸರ್ಕಲ್ ಪ್ಲೈ ಓವರ್ ಬಳಿ ಮಾದಕ ವಸ್ತು ಸೇವನೆ ಮಾಡಿರುವ ರೀತಿ ಕಂಡು ಬಂದಿದ್ದರಿಂದ ಮತ್ತು ಬಾಯಿಂದ ಘಾಟು ವಾಸನೆ ಬರುತ್ತಿದ್ದರಿಂದ ಪಿ.ಎಸ್.ಐ ಲಲಿತಾ ರಜಪೂತ ವಿಚಾರಣೆ ನಡೆಸಿದಾಗ ಮಾದಕ ಗಾಂಜಾ ಸೇವನೆ ಮಾಡಿರುವುದಾಗಿ ಆರೋಪಿತನು ಒಪ್ಪಿಕೊಂಡಿದ್ದನು.

ಆತನ ವೈದ್ಯಕೀಯ ಪರೀಕ್ಷೆಯನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು ವೈದ್ಯಾಧಿಕಾರಿಗಳು ನೀಡಿರುವ ಪರೀಕ್ಷಾ ವರದಿಯಲ್ಲಿ ಆರೋಪಿತ ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವುದು ದೃಡಪಟ್ಟಿದೆ. ಪಿ.ಎಸ್.ಐ ಲಲಿತಾ ರಜಪೂತ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Must Read