ದಿಗಂತ ವರದಿ ಅಂಕೋಲಾ :
ಶಿರೂರು ಗುಡ್ಡ ಕುಸಿತ ಘಟನೆ ಗೆ ಸಂಬಂಧಿಸಿದಂತೆ ಮತ್ತೊಂದು ಶವ ಪತ್ತೆಯಾಗಿದ್ದು, ಗುರುತು ಪತ್ತೆ ಕಾರ್ಯ ನಡೆದಿದೆ.ಮಂಗಳವಾರ ಸೇನಾಪಡೆಯ 30 ಕ್ಕೂ ಹೆಚ್ಜು ಯೋಧರು, ಮೆಟಲ್ ಡಿಕ್ಟೇರರ್ ಮೂಲಕ ನದಿಯ ಮಧ್ಯಭಾಗದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, NDRF ಮತ್ತು SDRF ಸಿಬ್ಬಂದಿ ಕೂಡಾ ಅವರಿಗೆ ಸಾಥ್ ನೀಡಿದ್ದಾರೆ..ನದಿ ಭಾಗದಲ್ಲಿನ ಮಣ್ಣು ತೆರವು ಕಾರ್ಯಾಚರಣೆ ಕೂಡಾ ನಡೆಯುತ್ತಿದೆ.