ಪ್ರಧಾನಿ ಮೋದಿಗೆ ಮಹತ್ವದ ಸಲಹೆ ನೀಡಿದ ಅಣ್ಣ ಸೋಮಾಭಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗುಜರಾತ್ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಮತಕಟ್ಟೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು.

ಇತ್ತ ಪ್ರಧಾನಿ ಮೋದಿ ಅಣ್ಣ ಸೋಮಾಭಾಯಿ ಮೋದಿ ಕೂಡ ಮತದಾನ ಮಾಡಿದ್ದಾರೆ. ಇದಕ್ಕೂ ಮುನ್ನ ಅಹಮ್ಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ.

ಈ ವೇಳೆ ಸೋಮಾಭಾಯಿ ತಮ್ಮ ಪ್ರೀತಿಯ ತಮ್ಮ (ಪ್ರಧಾನಿ ಮೋದಿ) ಬಳಿ ಕೆಲಹೊತ್ತು ಮಾತನಾಡಿದ್ದು, ಕೆಲವೊಂದು ಸಲಹೆಯನ್ನು ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ವರ್ಷ ಪೂರ್ತಿ ಬಿಡುವಿಲ್ಲದೇ ದೇಶಕ್ಕಾಗಿ ತಮ್ಮನು ತೊಡಗಿಸಿಕೊಳ್ಳುತ್ತಿದ್ದು, ಹೀಗಾಗಿ ಅಣ್ಣ ಸೋಮಾಭಾಯಿ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲು ಮೋದಿಗೆ ಸೂಚಿಸಿದ್ದಾರೆ.

ಪ್ರಧಾನಿ ಜೊತೆಗಿನ ಮಾತುಕತೆ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸೋಮಾಭಾಯಿ ಮೋದಿ, ವಿಶ್ರಾಂತಿ ಪಡೆಯಲು ಸೂಚಿಸಿದ್ದೇನೆ ಎಂದಿದ್ದಾರೆ. ಇದೇ ವೇಳೆ ಮತದಾರರಲ್ಲಿ ಸೋಮಾಭಾಯಿ ಮೋದಿ ಮನವಿ ಮಾಡಿದ್ದಾರೆ.ಎಲ್ಲಾ ಮತದಾರರಲ್ಲಿ ಒಂದೇ ಮನವಿ. ಜವಾಬ್ದಾರಿಯುತ ನಾಯಕ ಹಾಗೂ ಪಕ್ಷಕ್ಕೆ ಮತ ನೀಡಿದೆ. ಅಭಿವೃದ್ಧಿ ಪರ ಕೆಲಸ ಮಾಡುವ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!