CINE | ‘ನಮಾಜ್ ಮಾಡಿ ನಂತ್ರ ಬಿರಿಯಾನಿ ತಯಾರಿಸಿದ್ರೆ ಟೇಸ್ಟ್ ಸೂಪರ್’ ವಿವಾದದ ಸುಳಿಯಲ್ಲಿ ಅನ್ನಪೂರ್ಣಿ ಸಿನಿಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ನಯನತಾರಾ ನಟನೆಯ ಅನ್ನಪೂರ್ಣಿ ಸಿನಿಮಾ ರಿಲೀಸ್ ಆಗಿದ್ದು, ಒಟಿಟಿಯಲ್ಲಿ ಹಿಟ್ ಆಗಿದೆ.

ಈ ಸಿನಿಮಾದಲ್ಲಿ ನಟಿ ನಯನತಾರಾ ಹಿಂದೂ ಅರ್ಚಕರ ಮಗಳ ಪಾತ್ರ ಮಾಡಿದ್ದಾರೆ. ಶೆಫ್ ಆಗಲು ಆಸಕ್ತಿ ಹೊಂದಿರುವ ನಟಿಗೆ ಮಾಂಸದ ಆಹಾರ ಸೇವನೆ ಹಾಗೂ ತಯಾರಿಕೆ ಮಾಡೋದಕ್ಕೆ ಹಿಂದೆ ಮುಂದೆ ನೋಡೋದಿಲ್ಲ.

ಸಿನಿಮಾದಲ್ಲಿ ಕಾಂಪಿಟೇಷನ್ ಒಂದರಲ್ಲಿ ನಯನತಾರಾ ನಮಾಜ್ ಮಾಡಿ ನಂತರ ಬಿರಿಯಾನಿ ತಯಾರಿಸ್ತಾರೆ. ಈ ಬಿರಿಯಾನಿ ಎಲ್ಲರಿಗೂ ಇಷ್ಟವಾಗುತ್ತದೆ. ಪ್ರಾರ್ಥನೆ ಮಾಡಿ ತಯಾರಿಸಿದ್ದಕ್ಕೆ ಬಿರಿಯಾನಿ ಟೇಸ್ಟ್ ಚೆನ್ನಾಗಿದೆ ಎಂದು ನಟಿ ಹೇಳಿದ್ದಾರೆ.

ಇದರಿಂದಾಗಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹಿಂದೂ ಮುಖಂಡ ರಮೇಶ್ ಸೋಲಂಕಿ ಠಾಣೆ ಮೆಟ್ಟಿಲೇರಿದ್ದಾರೆ. ಸಿನಿಮಾದಲ್ಲಿ ಹಿಂದೂ ಅರ್ಚರಕ ಮಗಳು ನಮಾಜ್ ಮಾಡಿ ಬಿರಿಯಾನಿ ತಯಾರಿಸುತ್ತಾಳೆ. ಹಿಂದೂ ಹಾಗೂ ಮುಸ್ಲಿಂ ಲವ್ ಸ್ಟೋರಿ ಇರೋ ಕಾರಣ ಲವ್ ಜಿಹಾದ್‌ನ್ನು ಪ್ರತಿಪಾದಿಸುತ್ತಿದೆ. ಹಾಗೂ ನಟಿ ಶೆಫ್ ಆಗಲು ಹೊರಟಾಗ ಮೊದಲ ಬಾರಿ ಮಾಂಸ ತಿನ್ನೋದಕ್ಕೆ ಹಿಂದೆ ಮುಂದೆ ನೋಡುತ್ತಾಳೆ. ಆಗ ಮುಸ್ಲಿಂ ನಟ ಶ್ರೀರಾಮನೂ ಮಾಂಸ ತಿಂದಿದ್ದಾನೆ ಎಂದು ಹೇಳಿ ಆಕೆಯ ಮನವೊಲಿಸುತ್ತಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 ರಾಮಲಲಾ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಂತೆ ಬೇಕಂತಲೇ ಸಿನಿಮಾ ರಿಲೀಸ್ ಮಾಡಲಾಗಿದೆ ಎಂದು ದೂರಿದ್ದಾರೆ. ಹಿಂದೂ ಹಾಗೂ ಮುಸ್ಲಿಮರು ಬಾಂಧವ್ಯದಿಂದ ಇರಬೇಕು ಹಾಗೂ ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಳೆಯ ಮನಸ್ಸಿನಿಂದ ಅಡುಗೆ ಮಾಡಿದರೆ ರುಚಿ ಚೆನ್ನಾಗಿರುತ್ತದೆ ಎಂದು ಹೇಳುವ ಪ್ರಯತ್ನ ಸಿನಿಮಾ ಮಾಡಿದೆ ಎಂದು ಒಂದು ವರ್ಗದ ಜನರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!