ಮನೆಯಲ್ಲಿಯೇ ಮಾಡಬಹುದು ಅನ್ನವರಂ ಸತ್ಯನಾರಾಯಣ ಸ್ವಾಮಿ ಪ್ರಸಾದ..

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಅನ್ನವರಂ ಸತ್ಯನಾರಾಯಣ ಸ್ವಾಮಿ ಪ್ರಸಾದ ಅಂದರೆ ಇಷ್ಟಪಡದವರೇ ಇಲ್ಲ, ಸಾಮಾನ್ಯವಾಗಿ ಅದೆಷ್ಟೋ ಜನರಿಗೆ ಅಲ್ಲಿಗೆ ಹೋಗೋದಕ್ಕೆ ಸಾಧ್ಯವಾಗಿರುವುದಿಲ್ಲ. ಅಕಸ್ಮಾತ್‌ ನಿಮಗೆ ಅಲ್ಲಿನ ಪ್ರಸಾದ ಸವಿಯಬೇಕು ಅಂತಿದ್ದರೆ ನಾವು ಹೇಳಿದ ಮಾಡಿ ನೋಟಿ, ಥೇಟ್‌ ಅಲ್ಲಿನ ಪ್ರಸಾದದ ರುಚಿಯಂತೆಯೇ ಇರುತ್ತದೆ.

ಬೇಕಾಗುವ ಪದಾರ್ಥಗಳು

1 ಕಪ್ ಗೋಧೊ ರವೆ
1 ಕಪ್ ಸಕ್ಕರೆ
ಅರ್ಧ ಕಪ್ ಪುಡಿ ಮಾಡಿದ ಬೆಲ್ಲ
1/3 ಕಪ್ ತುಪ್ಪ
ಜಾಕಾಯಿ ತುಂಡು
1/4 ಪಟಿಕ
4-5 ಏಲಕ್ಕಿ
2 ಪಿಂಚ್ ಕೇಸರಿ
3 ನೀರು

ಮಾಡುವ ವಿಧಾನ: 

ಮೊದಲಿಗೆ ಒಂದು ಬಾಣಲೆಯಲ್ಲಿ ರವೆ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿದುಕೊಳ್ಳಬೇಕು. ಒಂದು ಕುಟಾಣಿಯೊಳಗೆ ಜಾಕಾಯಿ ತುಂಡು, 1/4 ಪಟಿಕ, 4-5 ಏಲಕ್ಕಿ ಕೇಸರಿ ಹಾಕಿ ನುಣ್ಣಗೆ ಪುಡಿ ಮಾಡಿಕೊಟ್ಟುಕೊಳ್ಳಿ. ನಂತರ ಒಂದು ದಪ್ಪ ತಳ ಇರುವ ಪಾತ್ರೆಗೆ ಮೂರು ಕಪ್‌ ನೀರು ಹಾಕಿ ಚೆನ್ನಾಗಿ ಕುದಿ ಬಂದ ಬಳಿಕ ಅದಕ್ಕೆ ಹುರಿದುಕೊಂಡ ರವೆ ಹಾಕಿ ಚೆನ್ನಾಗಿ ಬೇಯಿಸಿ. ಹದಿನೈದು ನಿಮಿಷದ ಬಳಿಕ ಒಂದು ಕಪ್‌ ಸಕ್ಕರೆ ಹಾಕಿ ಮತ್ತೆ ಬೇಯಿಸಿ. ಸಕ್ಕರೆ ಕರಗಿದ ಬಳಿಕ ಅರ್ಧ ಕಪ್‌ ಬೆಲ್ಲ ಸೇರಿಸಿ ಮಧ್ಯಮ ಉರಿಯಲ್ಲಿ ಮತ್ತೆ ಹತ್ತು ಹದಿನೈದು ನಿಮಿಷಗಳ ಕಾಲ ಬೇಯಿಸಿ ತುಪ್ಪ ಸೇರಿಸಿ ಮುಚ್ಚಳ ಮುಚ್ಚಿ. ತುಪ್ಪ ಮೇಲೆ ತೇಲುವವರೆಗೆ ಹದವಾಗಿ ಬೆಂದ ಬಳಿಕ ಅದಕ್ಕೆ ಪುಡಿ ಮಾಡಿದ ಸುಗಂಧ ದ್ರವ್ಯ ಸೇರಿಸಿ ಮತ್ತೈದು ನಿಮಿಷ ಬೇಯಿಸಿದರೆ ಅನ್ನವರಂ ಪ್ರಸಾದ ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!