ಬಿಜೆಪಿ ಅಭ್ಯರ್ಥಿಗಳ ಘೋಷಣೆ:: ಶಿಗ್ಗಾವಿಯಿಂದ ಸಿಎಂ ಬೊಮ್ಮಾಯಿ, ಉಳಿದ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಮಾಹಿತಿ ಇಲ್ಲಿದೆ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ವಿಧಾನಸಭಾ ಚುನಾವಣೆಯ ಬಿಜೆಪಿ ಮೊದಲ ಹಂತದ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ೧೮೯ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ವರಿಷ್ಠರು ಬಿಡುಗಡೆಗೊಳಿಸಿದರು. . ಈ ಮೂಲಕ 35 ಕ್ಷೇತ್ರಗಳ ಪಟ್ಟಿಯನ್ನು ಉಳಿಸಿಕೊಂಡಿದೆ.

ಜೊತೆಗೆ 52 ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಒಬಿಸಿಗೆ 32 ಟಿಕೆಟ್, ಎಸ್‌ಸಿ ಈ ಬಾರಿ ಹೊಸಬರಿಗೆ ಬಿಜೆಪಿ ಮಣೆ ಹಾಕಿದ್ದು, ಹಳಬರಿಗೆ ಕೋಕ್ ನೀಡಲಾಗಿದೆ. ಈ ಮೂಲಕ ಬಿಜೆಪಿ ಯುವನಾಯಕರತ್ತ ಚಿತ್ತ ಹರಿಸಿದೆ. ಗ್ರಾಮ ಮಟ್ಟದಿಂದ ರಾಜ್ಯ ನಾಯಕರ ತನಕ ಅಭಿಪ್ರಾಯ ಸಂಗ್ರಹಿಸಿ ಲಿಸ್ಟ್ ತಯಾರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಾರೆ.

ಯಾವ ಕ್ಷೇತ್ರದಲ್ಲಿ ಯಾರು ಟಿಕೆಟ್ ಪಡೆದಿದ್ದಾರೆ .

ಶಿಗ್ಗಾಂವಿ ಕ್ಷೇತ್ರ – ಬಸವರಾಜ ಬೊಮ್ಮಾಯಿ,ನಿಪ್ಪಾಣಿ – ಶಶಿಕಲಾ ಜೊಲ್ಲೆ, ಚಿಕ್ಕೋಡಿ – ರಮೇಶ್ ಕತ್ತಿ, ಅಥಣಿ – ಮಹೇಶ್ ಕುಮಟಳ್ಳಿ, ಕುಡಚಿ – ಪಿ.ರಾಜೀವ್, ಗೋಕಾಕ್ – ರಮೇಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು, ಬಳ್ಳಾರಿ ನಗರ – ಸೋಮಶೇಖರ ರೆಡ್ಡಿಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ, ಶಿಕಾರಿಪುರ – ಬಿ.ವೈ.ವಿಜಯೇಂದ್ರ, ಚಾಮರಾಜನಗರ – ವಿ. ಸೋಮಣ್ಣ, ವರುಣಾ – ವಿ. ಸೋಮಣ್ಣ, ಬೆಳ್ತಂಗಡಿ – ಹರೀಶ್ ಪೂಂಜಾ, ಬಂಟ್ವಾಳ – ರಾಜೇಶ್ ನಾಯಕ್​, ಪುತ್ತೂರು – ಆಶಾ ತಿಮ್ಮಪ್ಪ, ಮಡಿಕೇರಿ – ಅಪ್ಪಚ್ಚು ರಂಜನ್, ವಿರಾಜಪೇಟೆ – ಕೆ.ಜಿ.ಬೋಪಯ್ಯ, ನಂಜನಗೂಡು – ಡಾ. ಹರ್ಷವರ್ಧನ್​ .
ಉಳಿದ ಲಿಸ್ಟ್ ಇಲ್ಲಿದೆ…







 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!