ಹೊಸದಿಗಂತ ವರದಿ ಹಾವೇರಿ:
ಜನವರಿ ಕೊನೆಯ ವಾರದಲ್ಲಿ ಲೋಕಸಭಾ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಲ್ಲಾ 28 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ. ಪ್ರಸ್ತುತ ನಾಲ್ಕು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮಿಜೋರಾಮ್ ನಲ್ಲಿ ಸಹಕಾರದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತದಿಂದ ಜನರು ಭ್ರಮ ನಿರಸನಗೊಂಡಿದ್ದಾರೆ. ತೆಲಂಗಾಣದಲ್ಲಿ ಕೆಸಿಆರ್ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಲೋಕಸಭಾ ಚುನಾವಣೆಗೆ ಇದು ಸೆಮಿಪೈನಲ್ ಎಂದರು.
ಲೋಕಸಭಾ ಷುನಾವಣೆಯ ಫೈನಲ್ ಮ್ಯಾಚ್ ನಲ್ಲಿ ಇಂಡಿಯಾ ಗೆಲ್ಲುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜನತೆ ಮನ್ನಣೆಗೆ ಕೊಟ್ಟಿದ್ದಾರೆ. ಮುಂದಿನ ಆರು ತಿಂಗಳು ಬಿಜೆಪಿ ಸರಕಾರವನ್ನು ಬೆತ್ತಲೆ ಮಾಡುವ ಕೇಲಸ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಹತ್ತು ವರ್ಷ ಮೋದಿ ಸರಕಾರ ಏನು ಮಾಡಿದೆ? ನಾಚಿಕೆಯಾಗಬೇಕು ಅವರಿಗೆ, ಆರು ತಿಂಗಳು ಅತ್ತು ಕರೆದು ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ್ದಾರೆ. ರಾಜ್ಯಕ್ಕೆ ಬರಬೇಕಾದ ಪರಿಹಾರ ಕೊಡಿಸಿ ವಿಜಯೇಂದ್ರ ಅವರೇ ಎಂದು ಒತ್ತಾಯಿಸಿದರು.