BIG NEWS | ಇಸ್ರೋದಿಂದ ಮತ್ತೊಂದು ಸಾಧನೆ, ಆದಿತ್ಯ ಎಲ್1 ಉಡಾವಣೆ ಮೊದಲ ಹಂತ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ ಸಕ್ಸಸ್ ನಂತರ ಇಸ್ರೋ ಮತ್ತೊಂದು ಬೃಹತ್ ಸಾಧನೆಗೆ ಕೈ ಹಾಕಿದ್ದು, ಸೂರ್ಯಯಾನ ಯೋಜನೆ ಅಡಿಯಲ್ಲಿ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್ 1 ಪಿಎಸ್‌ಎಲ್‌ವಿ ರಾಎಕೆಟ್‌ನ ಉಡಾವಣೆ ಯಶಸ್ವಿಯಾಗಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಇದಾಗಿದೆ.

ಶ್ರೀಹರಿಕೋಟಾದಲ್ಲಿ ಸಾವಿರಾರು ಮಂದಿ ನಿಂತು ಉಡಾವಣೆ ವೀಕ್ಷಿಸಿದ್ದಾರೆ, ಇನ್ನು ಆನ್‌ಲೈನ್ ಹಾಗೂ ಲೈವ್‌ನಲ್ಲಿಯೂ ಕೋಟ್ಯಂತರ ಮಂದಿ ಉಡಾವಣೆ ವೀಕ್ಷಿಸಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!