ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ರಂಗದಲ್ಲಿ ಇತ್ತೀಚಿನ ದಿನಗಳಲ್ಲಿಲವ್, ಬ್ರೇಕಪ್, ಸೆಕ್ಸ್, ಡಿವೋರ್ಸ್ ಸಾಮಾನ್ಯವಾಗಿ ಬಿಟ್ಟಿದೆ.
ಈಗಾಗಲೇ ಟಾಲಿವುಡ್‌ನ ನಟಿ ಸಮಂತಾ, ನಿಹಾರಿಕಾ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಇದೀಗ ತೆಲುಗಿನ ನಟಿ ಸ್ವಾತಿ ರೆಡ್ಡಿ(Swathi Reddy), ದಾಂಪತ್ಯದಲ್ಲಿ ಬಿರುಕಾಗಿದೆ ಎಂಬ ಸುದ್ದಿಯಿದೆ.
2015ರಲ್ಲಿ ‘ಡೆಂಜರ್’ (Danger) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಸ್ವಾತಿ ರೆಡ್ಡಿ (Swathi Reddy) ಅವರು ಸಾಲು ಸಾಲಾಗಿ ತೆಲುಗು, ತಮಿಳು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ರು. ಸಿನಿಮಾದಲ್ಲಿ ಡಿಮ್ಯಾಂಡ್ ಇರುವಾಗಲೇ ಉದ್ಯಮಿ ವಿಕಾಸ್ ವಾಸು (Vikas Vasu) ಜೊತೆ ಸ್ವಾತಿ ರೆಡ್ಡಿ ಮದುವೆಯಾದರು. ಪ್ರೀತಿಸಿದ ಹುಡುಗ ವಿಕಾಸ್ ಜೊತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಪತಿ ವಿಕಾಸ್ ಜೊತೆಗಿನ ಫೋಟೋವನ್ನ ನಟಿ ಡಿಲೀಟ್ ಮಾಡಿದ್ದಾರೆ. ಸಮಂತಾ- ನಿಹಾರಿಕಾ ಕೂಡ ಹೀಗೆ ಮಾಡಿದ್ದರು. ಕೆಲ ತಿಂಗಳುಗಳ ನಂತರ ಡಿವೋರ್ಸ್ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದರು. ಪತಿ ಜೊತೆಗಿನ ಫೋಟೋವನ್ನ ಸ್ವಾತಿ ಡಿಲೀಟ್ ಮಾಡಿರೋ ಬೆನ್ನಲ್ಲೇ ಡಿವೋರ್ಸ್ (Divorce) ಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ಅಷ್ಟಕ್ಕೂ ಇದು ನಿಜಾನಾ? ಎಂಬುದನ್ನ ನಟಿ ರಿಯಾಕ್ಟ್ ಮಾಡುವವರೆಗೂ ಕಾಯಬೇಕಿದೆ.