ಬಾಂಗ್ಲಾದಲ್ಲಿ ಮತ್ತೊಂದು ಹಿಂದು ವಿರೋಧಿ ಕೃತ್ಯ ಬಹಿರಂಗ: 17 ನಾಯಕರ ಬ್ಯಾಂಕ್ ಖಾತೆ ಬ್ಲಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಂಗ್ಲಾದೇಶದಲ್ಲಿ ಹಿಂದು ವಿರೋಧಿ ಕೃತ್ಯಗಳ ವ್ಯಾಪಕವಾಗಿ ವ್ಯಕ್ತವಾಗತೊಡಗಿದೆ.ಇಸ್ಕಾನ್ ನ ಸಂತನೋರ್ವವನ್ನು ದೇಶದ್ರೋಹದಡಿ ಬಂಧನಕ್ಕೊಳಪಡಿಸಿದ ಬೆನ್ನಲ್ಲೇ ಈಗ ಬಾಂಗ್ಲಾದೇಶ ಮತ್ತೊಂದು ಹಿಂದು ವಿರೋಧಿ ನಡೆ ಮೂಲಕ ಸುದ್ದಿಯಾಗುತ್ತಿದೆ.

ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಹಣಕಾಸು ಇಲಾಖೆ ಅಧಿಕಾರಿಗಳು, ಚಿನ್ಮೋಯ್ ಕೃಷ್ಣ ದಾಸ್ ಸೇರಿ ಇಸ್ಕಾನ್ ಜೊತೆಗೆ ಗುರುತಿಸಿಕೊಂಡಿರುವ 17 ಹಿಂದು ನಾಯಕರ ಬ್ಯಾಂಕ್ ಖಾತೆಗಳನ್ನು 30 ದಿನಗಳ ವರೆಗೆ ಸ್ತಬ್ಧಗೊಳಿಸುವುದಕ್ಕೆ ಆದೇಶ ನೀಡಿದ್ದಾರೆ.

ಬಾಂಗ್ಲಾದೇಶ ಬ್ಯಾಂಕ್‌ನ ಹಣಕಾಸು ಗುಪ್ತಚರ ಘಟಕ (ಬಿಎಫ್‌ಐಯು) ಗುರುವಾರ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಈ ನಿರ್ದೇಶನಗಳನ್ನು ಕಳುಹಿಸಿದ್ದು, ಈ ಖಾತೆಗಳಲ್ಲಿನ ಎಲ್ಲಾ ರೀತಿಯ ವಹಿವಾಟುಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಿದೆ ಎಂದು ಪ್ರೋಥೋಮ್ ಅಲೋ ಪತ್ರಿಕೆ ವರದಿ ಮಾಡಿದೆ.

ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ ಜೋಟೆಯ ವಕ್ತಾರ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸೋಮವಾರ ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿದೆ. ಮಂಗಳವಾರ ಚಟ್ಟೋಗ್ರಾಮ್ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿ ಜೈಲಿಗೆ ಕಳುಹಿಸಿದೆ. ಭದ್ರತಾ ಸಿಬ್ಬಂದಿ ಮತ್ತು ಹಿಂದು ಮುಖಂಡನ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಸಾವನ್ನಪ್ಪಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!