ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೀದರ್, ಮಂಗಳೂರಲ್ಲಿ ಬ್ಯಾಂಕ್ ದರೋಡೆ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬ್ಯಾಂಕ್ ದರೋಡೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ.
ಕಾನ್ಪುರದ ಘಟಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್ಬಿಐ ಪತರಾ ಶಾಖೆಯಲ್ಲಿ ದರೋಡೆ ಯತ್ನವನ್ನು ಅಲ್ಲಿನ ಎಸ್ಬಿಐ ಬ್ಯಾಂಕ್ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ದುಷ್ಕರ್ಮಿಗಳೊಂದಿಗೆ ಹೋರಾಡಿದ ಬ್ಯಾಂಕ್ ಸಿಬ್ಬಂದಿ ಇಬ್ಬರ ಪೈಕಿ ಓರ್ವನನ್ನು ಹೆಡೆಮುರಿ ಕಟ್ಟಿದ್ದಾರೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕಾನ್ಪುರದ ಪತರಾ ಶಾಖೆಗೆ ಬೈಕ್ನಲ್ಲಿ ಬ್ಯಾಂಕಿಗೆ ಬಂದ ದುಷ್ಕರ್ಮಿಗಳು ಬ್ಯಾಂಕ್ ಪ್ರವೇಶಿಸಲು ಯತ್ನಿಸಿದ್ದಾರೆ. ಕೂಡಲೇ ಅಲ್ಲಿನ ಬ್ಯಾಂಕ್ ಸಿಬ್ಬಂದಿ ದರೋಡೆಕೋರರನ್ನು ತಡೆದಿದ್ದಾರೆ.
ಒಬ್ಬ ದುಷ್ಕರ್ಮಿ ಬಳಿ ಪಿಸ್ತೂಲ್, ಸ್ಕ್ರೂ ಡ್ರೈವರ್, ಮತ್ತೋರ್ವ ಚಾಕು, ಗನ್ ಹಿಡಿದು ಸಿಬ್ಬಂದಿಮೇಲೆ ದಾಳಿ ನಡೆಸಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಒಬ್ಬ ದರೋಡೆಕೋರರನ್ನು ತಳ್ಳಿದ್ದಾರೆ. ದರೋಡೆಕೋರ ಕೆಳಗೆ ಬಿದ್ದ ಕೂಡಲೇ ಬ್ಯಾಂಕ್ ಸಿಬ್ಬಂದಿ ಧಾವಿಸಿ ಅವನನ್ನು ಹಿಡಿದಿದ್ದಾರೆ.
ಘಟನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಷಿಯರ್ ಸೇರಿ ಸಿಬ್ಬಂದಿಗೆ ಗಾಯಗಳಾಗಿವೆ. ಘಟನೆಯಲ್ಲಿ ಓರ್ವ ದರೋಡೆಕೋರ ಸಿಕ್ಕಿಬಿದ್ದಿದ್ಧಾನೆ. ಮತ್ತೊಬ್ಬ ಪರಾರಿಯಾಗಿದ್ದಾನೆ.