ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋ, ಬಿಎಂಟಿಸಿ ಬಸ್ ದರ ಏರಿಕೆ ಬೆನ್ನಲ್ಲೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಇಂದು ಆಟೋ ದರ ಪರಿಷ್ಕರಣೆಯ ಬಗ್ಗೆ ಸಭೆ ನಡೆಯಲಿದ್ದು, ಆಟೋ ದರ ಏರಿಕೆಯ ಬಿಸಿ ತಟ್ಟಲಿದೆ.
ಇಂದು ಸಾರಿಗೆ ಇಲಾಖೆಯು ಆಟೋ ಚಾಲಕ ಸಂಘಟನೆ ಸಭೆ ಕರೆದಿದೆ. ಇಂದಿನ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಫೈನಲ್ ಆಗುವ ಸಾಧ್ಯತೆ ಇದೆ.
ಬೆಳಗ್ಗೆ 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.