ಮದ್ಯ ಪ್ರಿಯರಿಗೆ ಮತ್ತೊಂದು ಬಿಗ್ ಶಾಕ್: ಬಿಯರ್​ ಬೆಲೆ ಮತ್ತಷ್ಟು ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಬಿಯರ್ ದರ 10ರಿಂದ 20 ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಬಿಯರ್ ಬೆಲೆ 17 ತಿಂಗಳಲ್ಲಿ ಐದನೇ ಬಾರಿ ಏರಿಕೆಯಾಗಿದೆ. ಕಂಪನಿಗಳು ಒಂದು ತಿಂಗಳ ಹಿಂದೆಯಷ್ಟೇ ಬಿಯರ್ ಬೆಲೆಯನ್ನು ಹೆಚ್ಚಿಸಿದ್ದವು. ಹೆಚ್ಚಿದ ಕಚ್ಚಾ ವಸ್ತುಗಳ ಬೆಲೆಯಿಂದಾಗಿ, ನಾವು ಮತ್ತೆ ನಮ್ಮ ಬೆಲೆಗಳನ್ನು ಹೆಚ್ಚಿಸಿದ್ದೇವೆ ಎಂದಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಯರ್ ಬೆಲೆ 50 ರಿಂದ 60 ರೂ.ಗೆ ಏರಿಕೆಯಾಗಿದೆ.

ಸರ್ಕಾರವು ಈ ಹಿಂದೆ ಬಿಯರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್ ಕಂಪನಿಯು ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಫೆಬ್ರವರಿಯಲ್ಲಿ ಬಿಯರ್ ಬೆಲೆಯನ್ನು 10 ರೂ.ಗೆ ಹೆಚ್ಚಿಸಿತ್ತು, ಕಚ್ಚಾ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಪ್ರಸ್ತುತ ವಿವಿಧ ಕಂಪನಿಗಳು ಬಿಯರ್ ಬೆಲೆಯನ್ನು ಹೆಚ್ಚಿಸುತ್ತಿವೆ. ಇದರಿಂದ 15 ತಿಂಗಳೊಳಗೆ ಬಿಯರ್ ಬೆಲೆ ಸುಮಾರು 50-60 ರೂ.ಗೆ ಏರಿಕೆಯಾಗಲಿದೆ.

ಕೆಲವು ಕಂಪನಿಗಳ ಬಿಯರ್​ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರದಿಂದ ಜಾರಿಯಾಗಲಿದೆ. ಎಲ್ಲ ಬ್ರ್ಯಾಂಡ್​ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!