ಪಾಕ್ ಗೆ ಮತ್ತೊಂದು ಏಟು: ಮೇಲ್​, ಪಾರ್ಸೆಲ್​ ಸೇವೆ ಸ್ಥಗಿತಗೊಳಿಸಿದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್​ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಒಂದರ ಮೇಲೊಂದು ಕಠಿಣ ಕ್ರಮಕ್ಕೆ ಮುಂದಾಗಿರುವ ಭಾರತ, ಇದೀಗ ಎಲ್ಲಾ ರೀತಿಯ ಮೇಲ್​ ಮತ್ತು ಪಾರ್ಸೆಲ್​ಗಳನ್ನು ಸ್ಥಗತಗೊಳಿಸಿ ಆದೇಶ ಹೊರಡಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ಅಂಚೆ ಇಲಾಖೆಯ ಎಲ್ಲಾ ಸೇವೆಗಳು ಪಾಕಿಸ್ತಾನದ ಜೊತೆಗೆ ಎಲ್ಲಾ ರೀತಿಯ ಮೇಲ್​ ಮತ್ತ ಪಾರ್ಸೆಲ್​ ವಿನಿಮಯವನ್ನು ವಾಯು ಅಥವಾ ಭೂ ಮಾರ್ಗವಾಗಿ ಸ್ಥಗಿತಗೊಳಿಸಿ ಆದೇಶಿಸಿದೆ ಎಂದು ತಿಳಿಸಿದೆ.

ಈಗಾಗಲೇ ಸಿಂಧೂ ನದಿ ಜಲ ಒಪ್ಪಂದ ಅಮಾನತು, ದ್ವಿಪಕ್ಷೀಯ ಒಪ್ಪಂದಕ್ಕೆ ತಡೆ, ಅಟ್ಟಾರಿ ಗಡಿ ಬಂದ್​, ಪಾಕಿಸ್ತಾನ ಪ್ರಜೆಗಳಿಗೆ ದೇಶ ತೊರೆಯುವಂತೆ ಸೂಚಿಸಿದ್ದು, ಅದರ ಬೆನ್ನಲ್ಲೇ ಪಾಕಿಸ್ತಾನದಲ್ಲಿ ತಯಾರಾಗುವ ಯಾವುದೇ ಸರಕು ಉತ್ಪನ್ನಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾರತಕ್ಕೆ ಆಮದಾಗದಂತೆ ವ್ಯಾಪಾರ ವಹಿವಾಟಿನ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಭಾರತ ವಾಯು ಮಾರ್ಗ ಜಲ ಮಾರ್ಗವನ್ನೂ ಬಂದ್​ ಮಾಡಿದ್ದು, ಇದೀಗ ಅಂಚೆ ಸೇವೆಗಳನ್ನು ಕೂಡ ಸ್ಥಗಿತ ಮಾಡಲು ಕೇಂದ್ರ ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here