ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಚುನಾವಣೆಯಲ್ಲಿ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಮೆ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ.
ಆಸ್ಟ್ರೇಲಿಯನ್ ಚುನಾವಯಲ್ಲಿ 150 ಸ್ಥಾನಗಳ ಪೈಕಿ ಆಡಳಿತಾರೂಢ ಲೇಬರ್ ಪಕ್ಷಕ್ಕೆ 70 ಸ್ಥಾನಗಳು ಮತ್ತು ಸಂಪ್ರದಾಯವಾದಿ ವಿರೋಧ ಪಕ್ಷದ ಒಕ್ಕೂಟಕ್ಕೆ 24 ಸ್ಥಾನಗಳನ್ನು ನೀಡಲಾಗಿದೆ. ಅಲಿಪ್ತ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 13 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಇನ್ನು ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದ್ದು,ಈ ಪ್ರಚಾರದ ಸಮಯದಲ್ಲಿ ನಾವು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ, ಇಂದು ರಾತ್ರಿ ಅದು ಸ್ಪಷ್ಟವಾಗಿದೆ ಮತ್ತು ಅದನ್ನು ನಾನು ಸಂಪೂರ್ಣ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಗೆಲುವು ಸಾಧಿಸಿದ ಪ್ರಧಾನಿ ಅಂಥೋನಿ ಅವರನ್ನು ಅಭಿನಂದಿಸಲು ನಾನು ಅವರಿಗೆ ಕರೆ ಮಾಡಿದೆ. ಇದು ಲೇಬರ್ ಪಕ್ಷಕ್ಕೆ ಐತಿಹಾಸಿಕ ಸಂದರ್ಭವಾಗಿದೆ ಮತ್ತು ನಾವು ಅದನ್ನು ಗುರುತಿಸುತ್ತೇವೆ ಎಂದು ತಿಳಿಸಿದ್ದಾರೆ.