ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ಫೈಟ್ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಹೆಚ್ಚಾಗಿ ಮಾರ್ಮಿಕವಾಗಿ ಮಾತನಾಡುತ್ತಿದ್ದಾರೆ. ಇಂಥಾ ಬೆಳವಣಿಗೆ ನಡುವೆ ನಿನ್ನೆ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಕೆಶಿ, ನಾವು ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಒಪಿಎಸ್ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದ್ರೆ ಡಿಸಿಎಂ ಮಾತಿಗೆ ಕೇಕೆ ಹಾಕಿದ ನೌಕರರು ಡಿಕೆ ಡಿಕೆ ಅಂತ ಕೂಗಿದ್ದೇ ತಡ, ಮತ್ತೆ ಮಾರ್ಮಿಕ ಮಾತುಗಳನ್ನು ಮಾತನಾಡಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನೋಡ್ರಪ್ಪಾ ಮುಂದೆ ನಾನು ಚುನಾವಣೆ ನಿಂತಾಗ, ನೀವು ಈ ಡಿಕೆ ಡಿಕೆ ಎನ್ನುವ ಪದ ಉಪಯೋಗಿಸಿ. ನಾನು ಬಿಟ್ಟು ಹೋಗಲ್ಲ. ಇನ್ನು 8-10 ವರ್ಷ ಗಟ್ಟಿಯಾಗಿರುತ್ತೇನೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ತಮ್ಮ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎನ್ನುವ ಮೂಲಕ ಡಿಕೆಶಿ ಸಿಎಂ ಆಪ್ತರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.