ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕ್ಯಾನ್ಸರ್ ಗೆದ್ದು ಬಂದ ಮಲಯಾಳಂ ನಟಿ ಮಮತಾ ಮೋಹನ್ದಾಸ್ ಅವರು ಇದೀಗ ವಿಟಿಲಿಗೋ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಸುದೀಪ್ (Sudeeep) ನಟನೆಯ ‘ಗೂಳಿ’ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದರು. ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಮಮತಾ ಮೋಹನ್ ಮಲಯಾಳಂ ಮೂಲದವರು. ಜನಗಣಮನ, ಫಾರೆನ್ಸಿಕ್ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ.
ವಿಟಲೈಗೋ ಕಾಯಿಲೆ ಕಾಣಿಸಿಕೊಂಡ ನಂತರದಲ್ಲಿ ಅವರ ಚರ್ಮದ ಬಣ್ಣ ಅಲ್ಲಲ್ಲಿ ಮಾಸುತ್ತಿದೆ. ಈ ಸುದ್ದಿಯನ್ನು ಮಮತಾ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮಮತಾ ಅವರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ದೇಹದ ಕೆಲ ಭಾಗಗಳಲ್ಲಿ ಬಣ್ಣ ಕಳೆದುಕೊಂಡಿರುವುದು ಗೊತ್ತಾಗುತ್ತದೆ. ‘ಸೂರ್ಯನೇ ನಾನು ನಿನ್ನನ್ನು ಅಪ್ಪಿಕೊಳ್ಳುತ್ತಿದ್ದೇನೆ. ನಾನು ಬಣ್ಣವನ್ನು ಕಳೆದುಕೊಳ್ಳುತ್ತಿದ್ದೇನೆ. ಸಾಕಷ್ಟು ಮುಂಜಾನೆ ನಿನ್ನ ಕಿರಣಗಳನ್ನು ನೋಡಬೇಕೆಂದು ನಿನಗಿಂತ ಮೊದಲು ನಾನು ಎದ್ದಿದ್ದೇನೆ. ನಿನ್ನ ಕೃಪೆಗೆ ನಾನು ಸದಾ ಋಣಿ’ ಎಂದು ಅವರು ಬರೆದುಕೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಮಮತಾ ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಪ್ರಾರ್ಥಿಸಿದ್ದಾರೆ.