ನೇಪಾಳ ವಿಮಾನದ ಸಹ ಪೈಲಟ್ ಜೀವನ ಕಥೆ ಇದು: 16 ವರ್ಷಗಳ ಹಿಂದೆ ಪತಿ, ಈಗ ಪತ್ನಿಯ ಅಂತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನೇಪಾಳದ ಲ್ಲಿ ನಡೆದ ವಿಮಾನ ದುರಂತದಲ್ಲಿ 72 ಪ್ರಯಾಣಿಕರ ಜೊತೆ ಮಡಿದ ಸಹ ಪೈಲಟ್ ಅಂಜು ಖತಿವಾಡ ಅವರ ದುರಂತವೇ ಮನಕಲಕುವಂತದ್ದು.

ಯಾಕೆಂದರೆ 16 ವರ್ಷಗಳ ಹಿಂದೆ ನಡೆದ ಯೇತಿ ಏರ್‌ಲೈನ್ಸ್‌ನ (Yeti Airlines) ವಿಮಾನ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಪತ್ನಿ, ತಾನೂ ಅಂತಹದ್ದೇ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಕಾಕತಾಳೀಯವಾಗಿ, ಅವರ ಪತಿ ಯೇತಿ ಏರ್‌ಲೈನ್ಸ್ ಗೆ ಸಹ ಪೈಲಟ್ ಆಗಿದ್ದರು. ಹದಿನಾರು ವರ್ಷಗಳ ಹಿಂದೆ ಜೂನ್ 21, 2006 ರಂದು, ನೇಪಾಲಗಂಜ್‌ನಿಂದ ಸುರ್ಖೇತ್ ಮೂಲಕ ಜುಮ್ಲಾಗೆ ತೆರಳುತ್ತಿದ್ದ ಯೇತಿ ಏರ್‌ಲೈನ್ಸ್ 9N AEQ ವಿಮಾನವು ಅಪಘಾತಕ್ಕೀಡಾಗಿತ್ತು. ಈ ವೇಳೆ ಆರು ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದರು.

ಅಂಜು ಖತಿವಾಡ ಅವರು ಪೈಲಟ್ ಆಗುವ ಕೆಲವೇ ಕ್ಷಣಗಳ ಮುಂಚೆ ದುರಂತ ಸಂಭವಿಸಿದೆ.

ಭಾನುವಾರ ದುರಂತಕ್ಕೀಡಾದ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದರೆ ಅಂಜು ಖತಿವಾಡ ಪೈಲಟ್ ಆಗುತ್ತಿದ್ದರು. ಅಂಜು ಖತಿವಾಡ ಪೈಲಟ್ ಆಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನೂ ಕೆಲವೇ ಗಂಟೆಗಳು ಬಾಕಿಯಿತ್ತು. ಹಿರಿಯ ಕ್ಯಾಪ್ಟನ್ ಕೆ.ಸಿ ಕಮಲ್ ಪೈಲಟ್ ಆಗಿ, ಅಂಜು ಸಹ ಪೈಲಟ್ ಆಗಿದ್ದರು. ದುರಾದೃಷ್ಟ ಅದುವೇ ಅವರ ಕೊನೆಯ ಹಾರಾಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!