ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ? ಯಾವುದೀ ‘ಗ್ಲಾಂಡರ್ಸ್‌ ಡಿಸೀಸ್‌?’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಂಥ ಸಾಂಕ್ರಾಮಿಕ ರೋಗವೊಂದು ಕಾಣಿಸಿಕೊಂಡಿದೆ.
ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ (Glanders Disease)ಪತ್ತೆಯಾಗುವ ಮೂಲಕ ನಗರದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಭೀತಿ ಆರಂಭವಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ದೃಢಪಟ್ಟಿದ್ದು, ರೋಗಗ್ರಸ್ಥ ಕುದುರೆ ಮೃತಪಟ್ಟಿದೆ ಹಾಗೂ ಮತ್ತೊಂದು ಕುದುರೆಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

ರಾಜ್ಯ ಆರೋಗ್ಯ ಇಲಾಖೆಯು ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ತ್ವರಿತವಾಗಿ ಜಾಗೃತಿ ಮೂಡಿಸುತ್ತಿದೆ. ಸೋಂಕು ಪೀಡಿತ ಮತ್ತೊಂದು ಕುದುರೆಯನ್ನೂ ಕೂಡ ವೈಜ್ಞಾನಿಕವಾಗಿ ಕೊಲ್ಲುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಕಾರ, ಬೆಂಗಳೂರು ಉತ್ತರ ತಾಲೂಕಿನ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿರುವ ಖಾಲಿದ್ ಷರೀಫ್ ಎಂಬುವವರಿಗೆ ಸೇರಿದ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಕಾಣಿಸಿಕೊಂಡಿದೆ.

ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರಾಣಿಗಳ ನಿಯಂತ್ರಣ ಕಾಯ್ದೆ-2009 ಅನ್ವಯ ರೋಗ ಗ್ರಸ್ಥ ಕುದುರೆ ಇದ್ದ ಕೇಂದ್ರದಿಂದ 5-ಕಿಮೀ ವ್ಯಾಪ್ತಿಯನ್ನು ‘ಸೋಂಕಿತ ವಲಯ’ ಎಂದು ಘೋಷಿಸಲಾಗಿದೆ ಮತ್ತು 5-25 ಕಿಮೀ ವ್ಯಾಪ್ತಿಯ ಪ್ರದೇಶವನ್ನು ‘ಕಣ್ಗಾವಲು ವಲಯ’ ಎಂದು ಘೋಷಿಸಲಾಗಿದೆ.

ಈ ಪ್ರದೇಶದ ಒಳಗೆ ಮತ್ತು ಹೊರಗೆ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನವನ್ನು ನಿರ್ಬಂಧಿಸಲಾಗಿದೆ. ರೋಗಕ್ಕೆ ತುತ್ತಾದ ಕುದುರೆಗಳಿಗೆ ಯಾವುದೇ ಚಿಕಿತ್ಸೆ ಇಲ್ಲ. ಹೀಗಾಗಿ ಅವುಗಳಿಗೆ ದಯಾಮರಣ ನೀಡಲು ನಿರ್ಧರಿಸಲಾಗಿದ್ದು, ಕುದುರು ಮಾಲೀಕರಿಗೆ 25  ಸಾವಿರ ರೂಪಾಯಿ ಹಾಗೂ ಕತ್ತೆಗಳ ಮಾಲೀಕರಿಗೆ 16 ಸಾವಿರ ರೂಪಾಯಿ ನೀಡಲಾಗುತ್ತಿದೆ ಎನ್ನಲಾಗಿದೆ.

ರೋಗದ ಲಕ್ಷಣಗಳೇನು?
ಜ್ವರ
ಚಳಿ
ಚಳಿಜ್ವರ
ಬೆವರುವುದು
ಮೈ ಕೈ ನೋವು
ಎದೆನೋವು
ಮೈ ಗಟ್ಟಿ ಎನಿಸುವುದು
ತಲೆನೋವು
ಕಣ್ಣಿನಲ್ಲಿ ನೀರು ಸೋರುವುದು
ಬೇಧಿ
ಬಾಯಲ್ಲಿ ಹುಣ್ಣು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!