ಮುಡಾ ಕೇಸ್‌ನ ಮತ್ತೊಂದು ಸ್ಫೋಟಕ ವರದಿ ಬಹಿರಂಗ: ED ರಿಪೋರ್ಟ್‌ನಲ್ಲಿ ಸಿದ್ದರಾಮಯ್ಯ, ಪತ್ನಿ ಹೆಸರು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ದಿನಕ್ಕೆೊಂದರಂತೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ಇದೀಗ ಇಡಿ (ED) ತನಿಖೆಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಬಗ್ಗೆ ಸ್ಫೋಟಕ ವಿವರ ಬಹಿರಂಗವಾಗಿದೆ.

ಜಾರಿ ನಿರ್ದೇಶನಾಲಯ (ED) ಮನಿ ಲಾಂಡ್ರಿಂಗ್ ಆಗಿರೋ ಬಗ್ಗೆ ವರದಿ ತಯಾರಿಸಿದ್ದು, ವರದಿ ಕುರಿತು ಮುಡಾ ಆಯುಕ್ತರು, ಮುಡಾದಲ್ಲಿನ ಸಬ್ ರಿಜಿಸ್ಟ್ರಾರ್ ಹಾಗೂ ಮೈಸೂರಿನ 14 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ 104 ಪುಟಗಳ ಪತ್ರ ಬರೆದಿದೆ. ಪತ್ರದಲ್ಲಿ ಯಾರ‍್ಯಾರ ಪಾತ್ರ ಏನು..? ಹೇಗೆಲ್ಲಾ ಅಕ್ರಮ ನಡೆದಿದೆ ಅಂತ ಉಲ್ಲೇಖಿಸಿದ್ದು, 160 ಸೈಟುಗಳನ್ನ ಯಾವುದೇ ಪರಭಾರೆ ಮಾಡದಂತೆ ಸೂಚಿಸಿದೆ.

ಇಡಿ ತನಿಖೆಯಲ್ಲಿ ಬಹಿರಂಗವಾದ ಮಾಹಿತಿಗಳು

ಕೆಸರೆ ಗ್ರಾಮದ 3 ಎಕರೆ 26 ಗುಂಟೆ ಜಮೀನನ್ನು ಮುಡಾ 3.24 ಲಕ್ಷ ರೂಪಾಯಿ ವಶಪಡಿಸಿಕೊಂಡಿತ್ತು

ತಪ್ಪು ಮಾಹಿತಿ ಹಾಗೂ ಪ್ರಭಾವದಿಂದಾಗಿ ಡಿನೋಟಿಫಿಕೇಷನ್ ಕೈಬಿಡಲಾಗಿತ್ತು

ಮುಡಾ ಸೈಟ್ ಮಾಡಿ ಮಾರಾಟ ಮಾಡಿದ್ದ ಜಾಗವನ್ನ ಮಲ್ಲಿಕಾರ್ಜುನ ಸ್ವಾಮಿಯಿಂದ ಖರೀದಿ

ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದಾಗ ಮುಡಾ ಯಾವುದೇ ಆಕ್ಷೇಪ ಮಾಡಿಲ್ಲ

ಮುಡಾದಿಂದ ತಪ್ಪು ವರದಿ ಆಧರಿಸಿ ಮಲ್ಲಿಕಾರ್ಜುನ ಸ್ವಾಮಿ ಭಾಗವನ್ನು ರೆಸಿಡೆನ್ಸಿಯಲ್ ಜಾಗವಾಗಿ ಮಾರ್ಪಾಡು

ರಾಜಕೀಯ ಪ್ರಭಾವದಿಂದಾಗಿ ಐಷಾರಾಮಿ ಬಡಾವಣೆಯಲ್ಲಿ ಬದಲಿ ಸೈಟ್ ಪಡೆದ ಬಿ.ಎಂ. ಪಾರ್ವತಿ

ಮುಡಾದಿಂದ ಕಾನೂನು ಬಾಹಿರವಾಗಿ ಪರಿಹಾರ ಸೈಟ್ ಪಡೆಯಲಾಗಿದೆ

ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸೈಟ್ ಪಡೆಯಲಾಗಿದೆ

ಡಿ.ಬಿ. ನಟೇಶ್ ಮುಡಾ ಆಯುಕ್ತರಾಗಿದ್ದ ವೇಳೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ.

ಇಡಿ ತನಿಖೆಯಲ್ಲಿ ಪಿಎಂಎಲ್ಎ ಕಾಯಿದೆ ಸೆಕ್ಷನ್ 3 ಅಡಿ ಮನಿಲ್ಯಾಂಡ್ರಿಂಗ್ ನಡೆದಿರುವುದು ಸ್ಷಷ್ಟವಾಗಿದೆ

ಸಿದ್ದರಾಮಯ್ಯ, ಪಾರ್ವತಿ ಹೆಸರು ಉಲ್ಲೇಖ

ಇನ್ನು ಇಡಿ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಬಿ.ಎಂ. ಪಾರ್ವತಿ ಹೆಸರು ಉಲ್ಲೇಖಿಸಲಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜೆ. ದೇವರಾಜು ಆರೋಪಿಗಳಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಸಾವಿರಾರು ಸೈಟುಗಳ ಪೈಕಿ 631 ಸೈಟುಗಳ ಬೆನ್ನು ಬಿದ್ದಿರುವ ಇಡಿ, ಹಲವು ಸೈಟ್ ನುಂಗಣ್ಣರ ಬೆನ್ನು ಹತ್ತಿದೆ. 50:50 ಹೆಸರಿನಲ್ಲಿ 50ಕ್ಕೂ ಹೆಚ್ಚು ಮಂದಿಯಿಂದ 631 ಸೈಟುಗಳು ಗುಳುಂ ಆಗಿರೋ ಮಾಹಿತಿ ಲಭ್ಯವಾಗಿದೆ.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಲ್ಲಿ 14 ಸೈಟ್ ಹಂಚಿಕೆಯಾಗಿದೆ. ಆದರೆ ಈಗಾಗಲೇ ಅವರು ಪತ್ರ ಬರೆದು, ಸೈಟ್ ಹಿಂಪಡೆಯುವಂತೆ ಹೇಳಿದ್ದಾರೆ. ಇನ್ನು ಜೆಡಿಎಸ್ ಶಾಸಕ, ಮಾಜಿ ಸಚಿವ ಜಿಟಿ ದೇವೇಗೌಡ ಅಕ್ಕನ ಮಗನೂ ಮುಡಾದಿಂದ ಸೈಟ್ ಪಡೆದಿದ್ದಾನೆ.

ಇಡಿ ದಾಳಿ ಮಾಡಿದ್ದ ಕಾರ್ತಿಕ್ ಲೇ ಔಟ್ ಬಿಲ್ಡರ್ ಮಂಜುನಾಥ್ ಹೆಸರಲ್ಲಿ 30 ಸೈಟು ಅಲಾಟ್ ಆಗಿದೆ. ಇಡಿ ದಾಳಿಗೆ ಒಳಗಾಗಿದ್ ಪಾಪಣ್ಣ ಹೆಸರಲ್ಲಿ 20 ಸೈಟು ಹಂಚಿಕೆಯಾಗಿದೆ. ಬಿಲ್ಡರ್ ಜಯರಾಮ್ ಹೆಸರಿನಲ್ಲೂ ಸೈಟ್ ಹಂಚಿಕೆಯಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!