CINEMA | ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಅದ್ಧೂರಿ ಮದುವೆ, ಏನಂತಾರೆ ಅಮೃತಾ-ಡಾಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಅಮೃತಾ ಅಯ್ಯಂಗಾರ್ ಹಾಗೂ ಡಾಲಿ ಧನಂಜಯ್ ಜೋಡಿ ತೆರೆ ಮೇಲೆ ಎಷ್ಟು ಹಿಟ್ ಆಗಿದ್ಯೋ ನಿಜ ಜೀವನದಲ್ಲೂ ಅಷ್ಟೆ ಹಿಟ್!

ಅಮೃತಾ ಹಾಗೂ ಡಾಲಿ ಅಭಿನಯದ ಬಡವ ರ‍್ಯಾಸ್ಕರ್ ಹಿಟ್ ನಂತರ ಇದೀಗ ಹೊಯ್ಸಳ ಬಿಡುಗಡೆಗೆ ರೆಡಿಯಾಗಿದೆ. ನಿಮ್ಮ ಜೋಡಿ ನೋಡೋಕೆ ತುಂಬಾನೇ ಚೆನ್ನಾಗಿದೆ ನೀವು ಯಾಕೆ ಮದುವೆಯಾಗಬಾರದು ಎನ್ನುವ ಪ್ರಶ್ನೆ ಎದುರಾಗಿದೆ.

ಅಮೃತಾ ಅಯ್ಯಂಗಾರ್ ಇದಕ್ಕೆ ಉತ್ತರ ನೀಡಿದ್ದು, ನಿಮ್ಮ ಹಾಗೆ ಎಲ್ಲರೂ ನಾವಿಬ್ಬರೂ ಲವರ‍್ಸ್ ಅಂತ ತಪ್ಪು ತಿಳ್ಕೊಂಡಿದ್ದಾರೆ. ನನ್ನಿಂದ ಡಾಲಿಗೆ ಯಾರೂ ಹೆಣ್ಣು ಕೊಡೋಕೆ ಮುಂದೆ ಬರ‍್ತಿಲ್ಲ ಎಂದು ಅಮೃತಾ ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ಮಧ್ಯೆ ಗಟ್ಟಿಯಾದ ಸ್ನೇಹ ಇದೆ ಅಷ್ಟೆ ಬೇರೇನಿಲ್ಲ ಎಂದು ಅಮೃತಾ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!