ಬೆಂಗಳೂರು-ಮಂಗಳೂರು ಹಳಿಯ ಮೇಲೆ ಮತ್ತೆ ಗುಡ್ಡ ಕುಸಿತ: ಈ ರೈಲುಗಳ ಸಂಚಾರ ರದ್ದು

ಹೊಸದಿಗಂತ ವರದಿ, ಮಂಗಳೂರು:

ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆಯ ನಡುವೆ ರೈಲು ಹಳಿಯ ಮೇಲೆ ಮತ್ತೆ ಗುಡ್ಡವು ಶುಕ್ರವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಹಾಸನ-ಮಂಗಳೂರು ನಡುವಿನ ಬಾಳ್ಳುಪೇಟೆ ಸಮೀಪ ಭೂಕುಸಿತವಾದ ಹಿನ್ನೆಯಲ್ಲಿ ಶುಕ್ರವಾರ ಮದ್ಯಾಹ್ನದಿಂದ ರೈಲು ಸಂಚಾರ ಸ್ಥಗಿತಗೊಂಡಿದೆ.

ಸ್ಥಳಕ್ಕಾಗಮಿಸಿದ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿದರು.ಅಲ್ಲದೆ ಹಳಿಯ ಮೇಲೆ ಬಿದ್ದಿದ್ದ ಬೃಹತ್ ಪ್ರಮಾಣದ ಮಣ್ಣನ್ನು ತೆರವುಗೊಳಿಸಲು ಕಾರ್ಯಾಚರಣೆ ಆರಂಭಿಸಿದರು.ಗುಡ್ಡ ಕುಸಿತದಿಂದಾಗಿ ಮಂಗಳೂರು-ಸುಬ್ರಹ್ಮಣ್ಯ ಬೆಂಗಳೂರು ಸಂಚರಿಸುವ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಎರಡು ದಿನಗಳ ಹಿಂದೆ ಆರಂಭ
ಸಕಲೇಶಪುರ-ಬಾಳ್ಳುಪೇಟೆ ನಡುವೆ ಹಳಿಯ ಮೇಲೆ ಗುಡ್ಡವು ಆ.10ರಂದು ಶುಕ್ರವಾರ ಕುಸಿದಿತ್ತು. ಬಳಿಕ ಆ.14ರಂದು ಕಾರ್ಯಾಚರಣೆ ಸಂಪನ್ನವಾಗಿ ರೈಲು ಓಡಾಟ ಪುನರಾರಂಭವಾಗಿತ್ತು.ಇದೀಗ ಮತ್ತೆ ಆ.16(ಶುಕ್ರವಾರ) ಹಳಿಯ ಮೇಲೆ ಭೂಕುಸಿತವಾಗಿ ರೈಲು ಸಂಚಾರ ಸ್ಥಗಿತವಾಗಿದೆ.

ರೈಲುಗಳು ರದ್ದು:
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಅಚಾನಕ್ ಆಗಿ ಗುಡ್ಡ ಕುಸಿದಿಂದಾಗಿ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ(16585), ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು (16586),ಯಶವಂತಪುರ-ಕಾರವಾರ(16515), ಮಂಗಳೂರು ಜಂಕ್ಷನ್-ಯಶವಂತಪುರ(16576),ಕೆಎಸ್‌ಆರ್ ಬೆಂಗಳೂರು-ಕಾರವಾರ(16595), ಕಾರವಾರ-ಕೆಎಸ್‌ಆರ್ ಬೆಂಗಳೂರು(16596), ಕೆಎಸ್‌ಆರ್ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್(16511), ಕಣ್ಣೂರು-ಕೆಎಸ್‌ಆರ್ ಬೆಂಗಳೂರು(16512), ಯಶವಂತಪುರ-ಮಂಗಳೂರು ಜಂಕ್ಷನ್ (16539),ಮಂಗಳೂರು ಜಂಕ್ಷನ್-ಯಶವಂತಪುರ(16540), ವಿಜಯಪುರ-ಮಂಗಳೂರು ಸೆಂಟ್ರಲ್(7377), ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07378),ಯಶವಂತಪುರ-ಮಂಗಳೂರು ಜಂಕ್ಷನ್(16575), ಮಂಗಳೂರು ಜಂಕ್ಷನ್-ಯಶವಂತಪುರ(16576) ರೈಲುಗಳು ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ರದ್ದುಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!