ಮತ್ತೊಂದು ಭೀಕರ ಅಪಘಾತ: ಬಸ್‌ ಓವರ್‌ಟೇಕ್‌ ಮಾಡುವ ರಭಸದಲ್ಲಿ ಆಟೋ ಅಪ್ಪಚ್ಚಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸರಣಿ ಅಪಘಾತವಾಗಿದೆ. ಕೆಎಸ್​ಆರ್​ಟಿಸಿ ಬಸ್ ಮತ್ತು ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಪರಿಣಾಮ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಪಕ್ಕದಲ್ಲಿದ್ದ ವಾಹನಗಳಿಗೂ ಡ್ಯಾಮೇಜ್ ಆಗಿದೆ.

ಅಪಘಾತದ ಭೀಕರತೆ ಎಷ್ಟು ಇತ್ತು ಅಂದ್ರೆ ಡಿವೈಡರ್​ಗೆ ಗುದ್ದಿ ಬಸ್​ ಆಚೆಗೆ ಬಂದಿದೆ. ಬಲಬದಿಯಿಂದ ಬಸ್​ನ್ನು ಓವರ್​ಟೇಕ್​ ಮಾಡಲು ಬಂದ ಆಟೋ ಚಾಲಕ ಬಸ್​ ಹಾಗೂ ಡಿವೈಡರ್​ ನಡುವೆ ಸಿಲುಕಿ ಇಡೀ ಆಟೋವೇ ಜಖಂಗೊಂಡಿದೆ. ಇದರ ಜೊತೆಗೆ ಒಂದು ಕಾರ್​ನ ಹಿಂಭಾಗವೂ ಕೂಡ ಛಿದ್ರಗೊಂಡಿದ್ದು, ಖಾಸಗಿ ಬಸ್​ಗೂ ಕೂಡ ಹಾನಿಯುಂಟಾಗಿದೆ.

ಇನ್ನು ಇಬ್ಬರೂ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!