ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ 30 ವರ್ಷದ ನೈಜೀರಿಯಾದ ಮಹಿಳೆಗೆ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ನಗರದ ಒಂಬತ್ತನೇ ಮತ್ತು ಭಾರತದ 14ನೇ ಸೋಂಕಿನ ಪ್ರಕರಣವಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸೆಪ್ಟೆಂಬರ್ 16 ರಂದು ಮಹಿಳೆಯಲ್ಲಿ ಗುಳ್ಳೆಗಳು ಮತ್ತು ಕೀವು ತುಂಬಿದ ಗಾಯ ಕಾಣಿಸಿಕೊಂಡಿದ್ದು, ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಾಗಿದ್ದರು, ಆಕೆಯ ಪರೀಕ್ಷಾ ವರದಿ ಭಾನುವಾರ ಬಂದಿದೆ ಎಂದು ಅವರು ಹೇಳಿದರು.