ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಸಾಕ್ಷಿ ಬಹಿರಂಗಪಡಿಸಿದ್ದಾರೆ. ಸಿಎಂ ಪತ್ನಿ ಪಾರ್ವತಿ ಅವರ ಕ್ರಯಪತ್ರದ ಮುದ್ರಾಂಕದ ಶುಲ್ಕವನ್ನು ತಹಶೀಲ್ದಾರ್ ಅವರೇ ಪಾವತಿಸಿದ್ದಾರೆಂದು ಆರೋಪಿಸಿದ್ದಾರೆ.
ಮುಡಾದಿಂದ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸೈಟ್ ಪಡೆದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಅವರ ಕ್ರಯಪತ್ರದ ಮುದ್ರಾಂಕ ಶುಲ್ಕವನ್ನು ತಹಶೀಲ್ದಾರರು ಪಾವತಿ ಮಾಡಿದ್ದಾರೆ ಎಂದು ದೂರಿದ್ದಾರೆ. ಅದೇ ರೀತಿ ಮತ್ತೊಂದು ಕ್ರಯಪತ್ರದ ಉದಾಹರಣೆ ನೀಡಿ ದೂರುದಾರ ಆರೋಪಿಸಿದ್ದಾರೆ. ಆ ಕ್ರಯ ಪತ್ರದಲ್ಲಿ ನೋಂದಣಿ ಮಾಡಿಸಿಕೊಂಡ ವ್ಯಕ್ತಿಯಿಂದ ಹಣ ಪಾವತಿಯಾಗಿದೆ ಎಂದಿದ್ದಾರೆ.
ಸಿಎಂ ಪತ್ನಿ ವಿಚಾರದಲ್ಲಿ ಮುಡಾ ವಿಶೇಷ ತಹಶೀಲ್ದಾರ್‌ರಿಂದ ಹಣ ಪಾವತಿಯಾಗಿದೆ. ನನ್ನ ಆರೋಪಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಸ್ನೇಹಮಯಿ ಕೃಷ್ಣ ಬರೆದುಕೊಂಡಿದ್ದಾರೆ.