ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರದಲ್ಲಿನ ‘ಧಮ್ಮಿದ್ರೆ ಹಿಡ್ಕೋ ಬಾರೋ ಶೇಖಾವತ’ ಹಾಡಿಗೆ ಆಕ್ಷೇಪಣೆ ಬಂದ ಹಿನ್ನೆಲೆ ಅಲ್ಲು ಅರ್ಜುನ್ ಹಾಡಿದ್ದ ಹಾಡನ್ನು ಡಿಲೀಟ್ ಮಾಡಲಾಗಿದೆ.
ವಿಲನ್ ಭನ್ವರ್ ಸಿಂಗ್ ಶೇಖಾವತ್ ಮತ್ತು ಪುಷ್ಪರಾಜ್ ನಡುವಿನ ಸಂಘರ್ಷದ ದೃಶ್ಯಕ್ಕೆ ‘ಧಮ್ಮಿದ್ರೆ ಹಿಡ್ಕೋ ಬಾರೋ ಶೇಖಾವತ’ ಹಾಡಿನ ಮೂಲಕ ಸಿನಿಮಾದಲ್ಲಿ ತೋರಿಸಲಾಗಿತ್ತು. ಅಲ್ಲು ಅರ್ಜುನ್ ಹಾಡಿದ್ದ ಈ ಹಾಡು ಟ್ರಿಗರ್ ಮಾಡುವ ರೀತಿಯಲ್ಲಿದೆ ಎಂದು ಆಕ್ಷೇಪಣೆ ವ್ಯಕ್ತವಾಗಿದೆ. ಶೇಖಾವತ ಸಮುದಾಯದಿಂದಲೂ ವಿರೋಧ ಬಂದ ಹಿನ್ನೆಲೆ ಈ ಹಾಡನ್ನು ಸೋಶಿಯಲ್ ಮೀಡಿಯಾದಿಂದ ಇದೀಗ ಡಿಲೀಟ್ ಮಾಡಲಾಗಿದೆ.