Wednesday, September 27, 2023

Latest Posts

ವಿಮಾನದಲ್ಲಿ ಮತ್ತೊಂದು ಅಸಭ್ಯ ವರ್ತನೆ: ಫ್ಲೋರ್​ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯುಎಸ್ ಮೂಲದ ಸ್ಪಿರಿಟ್ ಏರ್​ಲೈನ್ಸ್​ ನಿರ್ವಹಿಸುವ ವಿಮಾನದಲ್ಲಿ ಮಹಿಳೆಯೊಬ್ಬರು ವಿಮಾನದ ಫ್ಲೋರ್​ನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿಮಾನ ಸಿಬ್ಬಂದಿ ಕೆಲವು ಗಂಟೆಗಳ ಕಾಲ ವಾಶ್​ರೂಂಗೆ ಹೋಗುವುದನ್ನು ತಡೆದಿದ್ದರು, ಹೀಗಾಗಿಗಂಟೆ ಗಟ್ಟಲೆ ಕಾದು ತಡೆದುಕೊಳ್ಳಲಾಗದೆ ಈ ಹೆಜ್ಜೆ ಇಡಬೇಕಾಯಿತು ಎಂದು ಮಹಿಳಾ ಪ್ರಯಾಣಿಕರು ತಿಳಿಸಿದ್ದಾರೆ.

ಇಂತಹ ಘಟನೆಗಳು ನಡೆದಿರುವುದು ಮೊದಲಲ್ಲ, 2018ರಲ್ಲಿ ವಿಮಾನದಲ್ಲಿ ಇಂಧನ ತುಂಬುತ್ತಿರುವಾಗ ಶೌಚಾಲಯವನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದಾಗ, ಪ್ರಯಾಣಿಕರೊಬ್ಬರು ವಿಮಾನ್ ಫ್ಲೋರ್​ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ್ದರು.

ಇದು ಅಸಹ್ಯಕರವಾದದ್ದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ,ಇದುವರೆಗೂ ಸ್ಪಿರಿಟ್ ಏರ್​ಲೈನ್ಸ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!