ಕಳಚಿದ ಮತ್ತೊಂದು ಹಿರಿಯ ಕೊಂಡಿ, ಬಹುಭಾಷಾ ನಟಿ ಪುಷ್ಪಲತಾ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮಿಳು ನಟ ಎವಿಎಂ ರಾಜನ್  ಅವರ ಪತ್ನಿ, ಹಿರಿಯ ನಟಿ ಪುಷ್ಪಲತಾ ನಿಧನರಾಗಿದ್ದಾರೆ. 87 ವರ್ಷದ ನಟಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

புஷ்பலதாவை விரட்டி வந்த உச்ச நடிகர்.. சினிமாவுக்கு வந்தது எப்படி? மக்கள்  மனதில் நின்ற நடிகை: பிரபலம் | Actress Pushpalatha and How did Pushpalatha  get into film ...ಚೆನ್ನೈನ ಟಿ. ನಗರದ ತಿರುಮಲ ಪಿಳ್ಳೈ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ನಟಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Pushpalatha: సీనియర్ నటి పుష్పలత కన్నుమూత | Veteran Actress Pushpalatha  Passes Away KBKಪುಷ್ಪಲತಾ ಅವರು 1958 ರಲ್ಲಿ ಬಿಡುಗಡೆಯಾದ ‘ಸೆಂಗೊಟ್ಟೈ ಸಿಂಗಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. 1961ರಲ್ಲಿ ಗುನಾಟ್ಟು ತಂಗಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟ ಎವಿಎಂ ರಾಜನ್ ಜೊತೆ ನಾನುಮ್ ಒರು ಪೆಣ್ ಚಿತ್ರದಲ್ಲಿ ನಟಿಸಿದ್ದರು. ಈ ಅವಧಿಯಲ್ಲಿ ಇಬ್ಬರು ಸ್ನೇಹಿತರಾಗಿದ್ದರು. ನಂತರ ಮದುವೆಯಾದರು. ಇಬ್ಬರು ಮಕ್ಕಳಿದ್ದಾರೆ.

ಪುಷ್ಪಲತಾ ಅನೇಕ ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಪೆದ್ದಕೊಡುಕು, ಅನ್ನದಮ್ಮುಲ್ ಅಫಿಲಿಯೇಶನ್, ಯುಗಪುರುಷುಡು, ರಾಜಪುತ್ರ ರಹಸ್ಯಂ, ಶ್ರೀರಾಮ ಪಟ್ಟಾಭಿಷೇಕಂ, ಮತ್ತು ಕೊಂಡವೀಟಿ ಸಿಂಹಂ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಮಾತ್ರವಲ್ಲ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸೇರಿ ಒಟ್ಟು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!