ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪ್ರಯಾಗ್ ರಾಜ್ ದಲ್ಲಿ ನಡೆಯುತ್ತಿರುವ ಐತಿಹಾಸಿಕ ಶತಮಾನದ ಮಹಾಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಷ್ಟಮಿ ದಿನ ಪುಣ್ಯಸ್ನಾನ ಮಾಡಿದ್ದಾರೆ.
ಪ್ರಯಾಗ್ ರಾಜ್ ದ ಸಂಗಮ ಘಾಟ್ ನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಪ್ರಧಾನಿ ಮೋದಿ ಪವಿತ್ರ ಗಂಗಾ ಜಲಕ್ಕೆ ಅರ್ಘ್ಯ ಬಿಟ್ಟು ಸುತ್ತು ಬಂದು ಕಣ್ಣುಮುಚ್ಚಿ ನೀರಿನ ಮಧ್ಯೆ ನಿಂತು ರುದ್ರಾಕ್ಷಿ ಮಾಲೆ ಹಿಡಿದುಕೊಂಡು ಧ್ಯಾನ ಮಾಡಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಾಥ್ ನೀಡಿದರು.
ಭಾರತದ ಸನಾತನ ಧರ್ಮದಲ್ಲಿ, ಮಹಾಕುಂಭದ ಸಮಯದಲ್ಲಿ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮಹಾಕುಂಭದಲ್ಲಿ ಸ್ನಾನ ಮಾಡುವುದು ವ್ಯಕ್ತಿಯ ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಎಲ್ಲಾ ಪಾಪಗಳನ್ನು ತೊಡೆದುಹಾಕಿ ಮೋಕ್ಷವನ್ನು ಪಡೆಯುತ್ತದೆ ಎಂದರ್ಥವಾಗಿದೆ.
#WATCH | Prime Minister Narendra Modi takes a holy dip at Triveni Sangam in Prayagraj, Uttar Pradesh
(Source: ANI/DD)
#MahaKumbh2025 pic.twitter.com/j3OQiCp80q
— ANI (@ANI) February 5, 2025