ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್‌ -‌ ಏಕಾಏಕಿ ವಾಟರ್‌ ಬಿಲ್‌ ಡಬಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ಳುತ್ತಿದೆಯಾ ಸರ್ಕಾರ ಎಂದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡುತ್ತಿದೆ. ಸರ್ಕಾರದ ಉಚಿತ ಭಾಗ್ಯಗಳ ನಡುವೆ ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಜೂನ್‌ ತಿಂಗಳಲ್ಲಿ ಬಂದಿರುವ ವಾಟರ್ ಬಿಲ್ ಏಕಾಏಕಿ ಡಬಲ್‌ ಆಗಿದೆ.

ಕೆಲ ಮನೆಗಳಿಗೆ ಬಂದಿರುವ ನೀರಿನ ಬಿಲ್‌ ಮೂರ‍್ನಾಲ್ಕು ಪಟ್ಟು ಹೆಚ್ಚಾಗಿದೆ. ಇದನ್ನು ಬೇಕಂತಲೇ ಮಾಡಿದ್ದಾರೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

ಬೆಂಗಳೂರಿನ ಕೆಲವು ಮನೆಗಳಲ್ಲಿ ಏಕಾಏಕಿ ಮನೆಯ ನೀರಿನ ಬಳಕೆಯ ಬಿಲ್ ಡಬಲ್, ತ್ರಿಬಲ್ ಆಗಿದೆ. ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಬಾಣ ಜನರಿಗೆ ಚುಚ್ಚುತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಅನ್ನೋ ಆರೋಪ ಕೂಡಾ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.

ಏಕಾಏಕಿ ನೀರಿನ ಶುಲ್ಕ ಹೆಚ್ಚಳ ಆಗಿದೆ. ಇದರಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಕಳೆದ ತಿಂಗಳು 930 ರೂ. ಬಂದಿತ್ತು, ಈ ತಿಂಗಳು ಏಕಾಏಕಿ 3,000 ದಾಟಿದೆ. ವಯಾಲಿಕಾವಲ್ ಬಳಿ ಒಂದೇ ರಸ್ತೆಯ ಹತ್ತಾರು ಮನೆಗಳಲ್ಲಿ ನೀರಿನ ಬಿಲ್ ಡಬಲ್ ಆಗಿರೋದು ನೋಡಿ ಜನ ದಂಗಾಗಿದ್ದಾರೆ.
ಜಲಮಂಡಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಚಿತ ಭಾಗ್ಯ ಒಕೆ ಅದ್ರೇ ಈ ರೀತಿಯಲ್ಲಿ ಸರ್ಕಾರ ನಮಗೆ ಬರೆ ಹಾಕ್ತಿದೆ ಅಂತ ಜನ ಆಕ್ರೋಶಗೊಂಡಿದ್ದಾರೆ. ಇನ್ನೂ ಜಲಮಂಡಳಿ ಅಧಿಕಾರಿಗಳನ್ನ ಕೇಳಿದ್ರೆ ಹೀಗೆ ಆಗಲು ಸಾಧ್ಯವಿಲ್ಲ. ಹೆಚ್ಚಿಗೆ ಬಿಲ್‌ಗೆ ಲೀಕೇಜ್ ಕಾರಣ ಇರಬಹುದು. ಒಂದೇ ರಸ್ತೆಯಲ್ಲಿ ಹತ್ತಾರು ಮನೆಗಳಿಗೆ ಈ ರೀತಿ ಆಗಿದೆ ಅಂದ್ರೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!