ಕೇರಳಕ್ಕೆ ಮತ್ತೊಂದು ಶಾಕ್: ಹತ್ತು ವರ್ಷದ ಬಳಿಕ ಮತ್ತೆ ಪತ್ತೆಯಾಗಿದೆ ಲೈಮ್ ಡಿಸೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ ಹತ್ತು ವರ್ಷದ ಬಳಿಕ ಕೇರಳ ರಾಜ್ಯದ ಎರ್ನಾಕುಳಂನಲ್ಲಿ ಲೈಮ್ ಡಿಸೀಸ್ (Lyme Disease) ಪತ್ತೆಯಾಗಿದೆ.
ಅತ್ಯಂತ ಅಪರೂಪದ ಈ ಕಾಯಿಲೆ ಬೊರೆಲಿಯಾ ಬರ್ಗ್‌ಡೋರ್‍ಫೆರಿ ಎಂಬ ಬ್ಯಾಕ್ಟೀರಿಯಾ ಮೂಲಕ ಹರಡುತ್ತಿದ್ದು, ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ 56 ವರ್ಷದ ವ್ಯಕ್ತಿಯೊಬ್ಬರಲ್ಲಿ ಈ ರೋಗವನ್ನು ವೈದ್ಯರು ದೃಢಪಡಿಸಿದ್ದಾರೆ.

ತೀವ್ರ ರೀತಿಯ ಜ್ವರ, ಮೊಣಕಾಲಿನ ಊತದಿಂದ ಡಿಸೆಂಬರ್ ತಿಂಗಳಿನಲ್ಲಿ ಈ ರೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕದ ದಿನಗಳಲ್ಲಿ ಅವರಿಗೆ ಅಪಸ್ಮಾರದ ಲಕ್ಷಣ ಕಾಣಿಸಿಕೊಂಡಿತ್ತು. ಬಹಳಷ್ಟು ಚಿಕಿತ್ಸೆ ಬಳಿಕವೂ ಗುಣಮುಖವಾಗದ ಹಿನ್ನೆಲೆಯಲ್ಲಿ ರೋಗಿಯ ಬೆನ್ನುಮೂಳೆ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಈ ವೇಳೆ ಲೈಮ್ ಡಿಸೀಸ್ ಇರುವುದು ಪತ್ತೆಯಾಗಿದೆ.

ಏನಿದರ ರೋಗ ಲಕ್ಷಣ?
ಲೈಮ್ ಡಿಸೀಸ್ ಬಾಧಿತ ರೋಗಿಗೆ ಜಿರಳೆ ಕಡಿತವಾದಲ್ಲಿ ಚರ್ಮದ ತುರಿಕೆ, ಊತ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡದಿದ್ದರೆ, ನಿಧಾನವಾಗಿ ರೋಗವು ಉಲ್ಬಣಗೊಂಡು ಮೆದುಳು ಹಾಗೂ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!