ಮನೀಶ್ ಸಿಸೋಡಿಯಾಗೆ ಮತ್ತೊಂದು ಶಾಕ್: ಅಸ್ಸಾಂ ಕೋರ್ಟ್ ನಿಂದ ಸಮನ್ಸ್ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲಿನ ಅಬಕಾರಿ ಹಗರಣದ ತನಿಖೆ, ಆಪ್ತರ ಮೇಲೆ ದಾಳಿ ಒಂದಡೆಯಾದರೆ, ಮತ್ತೊಂದೆದೆ ಅಸ್ಸಾಂ ಮುಖ್ಯಮಂತ್ರಿ ಹಾಗೂ ಪತ್ನಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಮನೀಶ್ ಸಿಸೋಡಿಯಾಗೆ ಇದೀಗ ಸಮನ್ಸ್ ನೀಡಲಾಗಿದೆ.

ಕೋವಿಡ್ ವೇಳೆ ಹಿಮಂತ್ ಬಿಸ್ವಾ ಶರ್ಮಾ ಹಾಗೂ ಶರ್ಮಾ ಪತ್ನಿ ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಕಿಟ್ ಖರೀದಿ ಮಾಡಿದ್ದಾರೆ ಎಂದು ಸಿಸೋಡಿಯಾ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದರು. ಸತತ ಆರೋಪ ಮಾಡಿದ ಸಿಸೋಡಿಯಾ ವಿರುದ್ಧ ಹಿಮಂತ್ ಬಿಸ್ವಾ ಶರ್ಮಾ ಮಾನನಷ್ಟ ಮೊಕದ್ದಮೆ ದಾವೆ ಹೂಡಿದ್ದು, ಈ ಪ್ರಕರಣದಲ್ಲಿ ಇದೀಗ ಕೋರ್ಟ್ ಸಿಸೋಡಿಯಾಗೆ ಸಮನ್ಸ್ ನೀಡಿದೆ.

ಯಾವ ಆಧಾರದಲ್ಲಿ ಈ ಆರೋಪಗಳನ್ನು ಮಾಡಲಾಗಿದೆ ಅನ್ನೋದನ್ನು ಸಾಬೀತುಪಡಿಸಬೇಕಿದೆ. ಇದೀಗ ಈ ಪ್ರಕರಣವೂ ಆಮ್ ಆದ್ಮಿ ಪಾರ್ಟಿಗೆ ತೀವ್ರ ಹಿನ್ನಡೆ ತರುವ ಸಾಧ್ಯತೆ ಇದೆ.

ಪಿಪಿಇ ಕಿಟ್‌ ಖರೀದಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಅವರ ಪತ್ನಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿರುದ್ಧ ಹಿಮಂತ ಅವರ ಪತ್ನಿ ರಿನಿಕಿ ಭುಯಾನ್‌ ಶರ್ಮಾ 100 ಕೋಟಿ ರು. ಮಾನನಷ್ಟಮೊಕದ್ದಮೆ ದಾಖಲಿಸಿದ್ದರು. ಕಾಮರೂಪ ಮೆಟ್ರೋಪಾಲಿಟಿನ್‌ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟಮೊಕದ್ದಮೆ ದಾಖಲಿಸಿದ್ದರು.

ಅಬಕಾರಿ ಹಗಣರದಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಆಪ್ತ ದಿನೇಶ್‌ ಅರೋರಾ ಮಾಫಿ ಸಾಕ್ಷಿಯಾಗಲಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ದೆಹಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಅಬಕಾರಿ ಸಚಿವರೂ ಆಗಿರುವ ಸಿಸೋಡಿಯಾಗೆ ಮತ್ತಷ್ಟುಸಂಕಷ್ಟಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!