ರಷ್ಯಾಗೆ ಮತ್ತೊಂದು ಶಾಕ್‌: ವ್ಯಾಪಾರ ನಿಲ್ಲಿಸಿದ ಟಾಟಾ ಸ್ಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್ ರಷ್ಯಾ ನಡುವಿನ ಭೀಕರ ಕದನದಿಂದ ದಿನೇ ದಿನೇ ಹಲವು ರಾಷ್ಟ್ರಗಳು ರಷ್ಯಾ ನಡುವಿನ ವ್ಯಾಪಾರ ಸಂಬಂಧ ಅಂತ್ಯಗೊಳಿಸುತ್ತಿದ್ದು, ಇದೀಗ ಭಾರತದ ಟಾಟಾ ಸ್ಟೀಲ್ ರಷ್ಯಾದೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸಲಿದೆ ಎಂದು ಹೇಳಿದೆ.
‘ಟಾಟಾ ಸ್ಟೀಲ್ ರಷ್ಯಾದಲ್ಲಿ ಯಾವುದೇ ಕಾರ್ಯಾಚರಣೆ ಅಥವಾ ಉದ್ಯೋಗಿಗಳನ್ನು ಹೊಂದಿಲ್ಲ. ರಷ್ಯಾದೊಂದಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ’ ಎಂದು ಟಾಟಾ ಸ್ಟೀಲ್ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ, ಯುಕೆ ಮತ್ತು ನೆದರ್ಲ್ಯಾಂಡ್ಸ್‌ನಲ್ಲಿನ ಕಂಪನಿಯ ಎಲ್ಲಾ ಉಕ್ಕು ಉತ್ಪಾದನಾ ಕೇಂದ್ರಗಳು ರಷ್ಯಾದ ಮೇಲಿನ ಅವಲಂಬನೆಯನ್ನ ಕೊನೆಗೊಳಿಸಲು ಕಚ್ಚಾ ವಸ್ತುಗಳ ಪರ್ಯಾಯ ಪೂರೈಕೆಯನ್ನ ಪಡೆದುಕೊಂಡಿವೆ ಎಂದು ಟಾಟಾ ಸ್ಟೀಲ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!