ದ್ವೀಪ ರಾಷ್ಟ್ರದ ಕಷ್ಟಕ್ಕೆ ಆಸರೆಯಾದ ಭಾರತ: ಮತ್ತೆ 500 ಮಿಲಿಯನ್ ಡಾಲರ್ ಇಂಧನ ನೆರವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ನರಳಾಡುತ್ತಿರುವ ಶ್ರೀಲಂಕಾಕ್ಕೆ ಈಗಾಗಲೇ ಭಾರತ ಹಲವು ರೀತಿಯಲ್ಲಿ ಸಹಾಯ ಮಾಡಿದ್ದು, ಇದೀಗ ಹೆಚ್ಚುವರಿ 500 ಮಿಲಿಯನ್ ಡಾಲರ್ ಇಂಧನ ನೆರವು ನೀಡಲಿದೆ ಎಂದು ದ್ವೀಪ ರಾಷ್ಟ್ರದ ವಿದೇಶಾಂಗ ಸಚಿವ ಜಿ.ಎಲ್.ಪೀರಿಸ್ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವ, ‘ಐಎಂಎಫ್‌ನ ಸಹಾಯವು ನಮ್ಮ ಬಳಿಗೆ ಬರಲು ಸುಮಾರು ಆರು ತಿಂಗಳುಗಳನ್ನ ತೆಗೆದುಕೊಳ್ಳುತ್ತದೆ ಮತ್ತು ಅದು ಕಂತುಗಳಲ್ಲಿ ಬರುತ್ತದೆ. ಈ ಅವಧಿಯಲ್ಲಿ, ನಮ್ಮ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ನಾವು ಹಣವನ್ನು ಕಂಡು ಹಿಡಿಯಬೇಕಾಗಿದೆ.

ಈಗಾಗಲೇ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿರುವ ಶ್ರೀಲಂಕಾ ಸರ್ಕಾರಕ್ಕೆ ಭಾರತವು ಇಂಧನ ಸಾಲವಾಗಿ ಒದಗಿಸಿದ ಎರಡನೇ 500 ಮಿಲಿಯನ್ ಡಾಲರ್ ಇದಾಗಿದೆ. ಈ ತಿಂಗಳ ಆರಂಭದಲ್ಲಿ 1,20,000 ಟನ್ ಡೀಸೆಲ್ ಮತ್ತು 40,000 ಟನ್ ಪೆಟ್ರೋಲ್ ಸಾಗಿಸಿದ ನಂತ್ರ ಮೊದಲ ಸಾಲಿನ ಸಾಲವನ್ನು ಬಳಸಲಾಯಿತು. ಇಲ್ಲಿಯವರೆಗೆ ಭಾರತವು ಸುಮಾರು 400,000 ಟನ್ ಇಂಧನವನ್ನು ಒದಗಿಸಿದ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!