ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕ್: ಪಾರ್ಕಿಂಗ್ ಸ್ಥಳದ ತೆರಿಗೆ ಹೆಚ್ಚಳ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜ್ಯ ಸರ್ಕಾರ ಜನರಿಗೆ ಒಂದರ ಮೇಲೆ ಒಂದು ಶಾಕ್ ನೀಡುತ್ತಿದ್ದು, ಹಾಲು, ವಿದ್ಯುತ್ ದರ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ವಸತಿ ಮತ್ತು ವಸತಿಯೇತರ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳ ಆಸ್ತಿ ತೆರಿಗೆ ಪರಿಷ್ಕರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ .

ಅಧಿಸೂಚನೆಯ ಪ್ರಕಾರ, ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂಪಾಯಿ ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 2 ರೂ.) ವಿಧಿಸಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ(ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ.ಈ ಅಧಿಸೂಚನೆ ಪ್ರಕಟವಾದ ಏಳು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಎಲ್ಲಾ ಪಾರ್ಕಿಂಗ್ ಪ್ರದೇಶದ ಸ್ಲಾಟ್‌ಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಪಾರ್ಕಿಂಗ್ ಪ್ರದೇಶಗಳ ತೆರಿಗೆ ದರಗಳು ವಲಯವಾರು ಲೆಕ್ಕಾಚಾರವನ್ನು ಆಧರಿಸಿದ್ದವು ಮತ್ತು ಇದು ಅಸಮಾನತೆಗೆ ಕಾರಣವಾಗಿ ಪಾರ್ಕಿಂಗ್ ಸ್ಥಳಗಳ ಮೇಲೆ ಸುಮಾರು ಶೇ. 50 ರಷ್ಟು ತೆರಿಗೆ ಪಾವತಿಸಬೇಕಾಗಿತ್ತು. ಈಗ ಏಕರೂಪ ಮತ್ತು ಪ್ರಮಾಣೀಕೃತ ವ್ಯವಸ್ಥೆಯನ್ನು ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!