ರಾಜ್ಯದ ಜನರಿಗೆ ಮತ್ತೊಂದು ಶಾಕ್: ಖಾಸಗಿ ಬಸ್ ಗೂ ದರ ಏರಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದಲ್ಲ ಒಂದು ಬೆಲೆ ಏರಿಕೆಗೆ ತುತ್ತಾಗಿರುವ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಖಾಸಗಿ ಬಸ್ ದರ ಶೇಕಡಾ 15ರಷ್ಟು ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

ರಾಜ್ಯದಲ್ಲಿ ಶೇ.15ರಷ್ಟು ಟಿಕೆಟ್‌ ದರ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರು ನಿರ್ಧಾರ ಮಾಡಿದ್ದಾರೆ. ಇದೇ ಏಪ್ರಿಲ್ 15ರ ನಂತರ ಪರಿಷ್ಕೃತ ದರ ಜಾರಿಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಡಿಸೇಲ್ ದರ ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕರ ಸಂಘ ಡಿಸೇಲ್ ದರ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಏಪ್ರಿಲ್ 15ರವರೆಗೂ ಗಡುವು ನೀಡಿದೆ.

ಲಾರಿ ಮಾಲೀಕರ ಅಸೋಸಿಯೇಷನ್ ಈಗಾಗಲೇ ಮುಷ್ಕರಕ್ಕೆ ಕರೆ ಕೊಟ್ಟಿದೆ. ಏಪ್ರಿಲ್ 15ರ ಒಳಗೆ ಸರ್ಕಾರ ಡೀಸೆಲ್ ದರ ಕಡಿಮೆ ಮಾಡದಿದ್ರೆ ಖಾಸಗಿ ಬಸ್ ದರ ಏರಿಕೆ ಮಾಡುವುದಾಗಿ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಎಸ್. ನಟರಾಜ್ ಹೇಳಿಕೆ ನೀಡಿದ್ದಾರೆ.

ಲಾರಿ ಮಾಲೀಕರ ಸಂಘದ ಬಂದ್‌ಗೆ ನಮ್ಮ ಬೆಂಬಲ ಇದೆ. ಅಂದೇ ಖಾಸಗಿ ಬಸ್ ಬಂದ್ ಮಾಡಬೇಕೇ? ಪ್ರತ್ಯೇಕವಾಗಿ ಬಂದ್ ಮಾಡಬೇಕೇ? ಈ ಬಗ್ಗೆ ನಿರ್ಧಾರ ಮಾಡಲಿದ್ದೇವೆ. ರಾಜ್ಯದಲ್ಲಿ 14 ಸಾವಿರ ಖಾಸಗಿ ಬಸ್‌ಗಳು ಇವೆ. ಬೆಂಗಳೂರಿನಲ್ಲಿಯೇ ಎರಡೂವರೆ ಸಾವಿರ ಬಸ್ ಇವೆ.ಖಾಸಗಿ ಬಸ್ ದರ ಪ್ರತಿ ಸ್ಟೇಜ್‌ಗೆ 2 ರೂ. ಹೆಚ್ಚಳ ಮಾಡಲಾಗುತ್ತೆ. ಸ್ಟೇಜ್ ಕ್ಯಾರೇಜ್ ಬಸ್ ದರ ಏರಿಕೆ ಸರ್ಕಾರ ನಿರ್ಧರಿಸುತ್ತೆ. ನಾವು ಪ್ರತಿ ಟಿಕೆಟ್, ಪ್ರತಿ ಸ್ಟೇಜ್‌ಗೆ ದರ ಹೆಚ್ಚಳ ನಾವು ಮಾಡಬಹುದು. ಲಕ್ಸುರಿ, ಎಸಿ, ಸ್ಲೀಪರ್ ಟಿಕೆಟ್ ದರ ಶೇ.15ಷ್ಟು ದರ ಏರಿಕೆ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಬಸ್ ದರ ಎಷ್ಟಿತ್ತು? ಎಷ್ಟಾಗುತ್ತೆ?
ಬೆಂಗಳೂರು TO ಹುಬ್ಬಳ್ಳಿ: ಈಗಿನ ದರ ₹1000-₹1100, ಪರಿಷ್ಕೃತ ದರ ₹1200-₹1300, ವೀಕೆಂಡ್‌ನಲ್ಲಿ ₹1500
ಬೆಂಗಳೂರು TO ಕಲಬುರಗಿ: ಈಗಿನ ದರ ₹1300, ಪರಿಷ್ಕೃತ ದರ :₹1500, ವೀಕೆಂಡ್‌ನಲ್ಲಿ ₹1500-₹1700
ಬೆಂಗಳೂರು TO ಮಂಗಳೂರು: ಈಗಿನ ದರ ₹900 – ₹1100, ಪರಿಷ್ಕೃತ ದರ ₹1200 – ₹1500, ವೀಕೆಂಡ್‌ನಲ್ಲಿ ₹1500 -₹1800

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!