ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಫೈನಲ್ ನಲ್ಲಿ ಅರ್ಜೆಂಟೀನಾ ವಿರುದ್ಧ ಸೋತ ಫ್ರಾನ್ಸ್ ಈಗಾಗಲೇ ಬೇಸರದಲ್ಲಿದ್ದು, ಇದೀಗ ತಂಡದ ಸ್ಟ್ರೈಕರ್ ಕರೀಂ ಬೆನ್ಜೆಮಾ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಫ್ರಾನ್ಸ್ ಪರ 97 ಪಂದ್ಯಗಳಲ್ಲಿ 37 ಬಾರಿ ಸ್ಕೋರ್ ಮಾಡಿರುವ ಬ್ಯಾಲನ್ ಡಿ’ಓರ್ ವಿಜೇತ ಬೆನ್ಜೆಮಾ, ಟೂರ್ನಿಯ ಆರಂಭದ ಹಿಂದಿನ ದಿನ ತರಬೇತಿಯಲ್ಲಿ ಗಾಯಗೊಂಡು ಕತಾರ್ ನಲ್ಲಿ ನಡೆದ ವಿಶ್ವಕಪ್ ನಿಂದ ಹೊರಗುಳಿದಿದ್ದಾರೆ.