ಚಂದ್ರನ ಮುತ್ತಿಕ್ಕಲು ಇಸ್ರೋಗೆ ಇನ್ನೊಂದೇ ಹೆಜ್ಜೆ : ಎಲ್ಲರ ಚಿತ್ತ ಆಗಸ್ಟ್ 23 ರ ಸಂಜೆ 6.4ರತ್ತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ-3ರ ಎರಡನೆಯ ಮತ್ತು ಕೊನೆಯ ಡಿ- ಬೂಸ್ಟಿಂಗ್ ಕಾರ್ಯ ಭಾನುವಾರ ಬೆಳಿಗ್ಗೆ ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದರ ಬೆನ್ನಲ್ಲೇ ಚಂದ್ರಯಾನ 3 ನೌಕೆಯ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡಿಂಗ್ ಆಗುವ ದಿನಾಂಕ ಘೋಷಣೆ ಮಾಡಿದೆ.

ನೌಕೆಯು ಚಂದ್ರನ ಅಂತಿಮ ಕಕ್ಷೆಯನ್ನು ತಲುಪಿದ್ದು, ದಕ್ಷಿಣ ದ್ರುವದಲ್ಲಿ ಲ್ಯಾಂಡ್ ಆಗಬೇಕಿದೆ. ಇದಕ್ಕೆ ಇದೀಗ ಇಸ್ರೋ ಮುಹೂರ್ತ ನಿಗದಿಪಡಿಸಿದ್ದು, ಆ. 23 ರಂದು ಸಂಜೆ 6.4 ಕ್ಕೆ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ.

ಪ್ರಸ್ತುತ ವಿಕ್ರಮ್ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪವಿರುವ ಬಿಂದು 25 ಕಿಮೀ ಮತ್ತು ಚಂದ್ರನಿಂದ 134 ಕಿಮೀ ದೂರದ ಕಕ್ಷೆಯನ್ನು ತಲುಪಿದೆ. ಈ ಕಕ್ಷೆಯಿಂದಲೇ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನಿಸುತ್ತದೆ ಎಂದು ಇಸ್ರೊ ಹೇಳಿದೆ.

ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23 ರಂದು ಬೆಳಿಗ್ಗೆ 17.45 ಗಂಟೆಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಲ್ಯಾಂಡರ್ ವಿಕ್ರಮ್ ಸ್ವಯಂಚಾಲಿತ ಕ್ರಮದಲ್ಲಿ ಚಂದ್ರನ ಕಕ್ಷೆಯಲ್ಲಿ ಇಳಿಯುತ್ತಿದೆ; ಹೇಗೆ ಹೋಗಬೇಕೆಂದು ಅದು ತಾನಾಗಿಯೇ ನಿರ್ಧರಿಸುತ್ತದೆ ಎಂದು ಇಸ್ರೊ ‘x’ ನಲ್ಲಿ ತಿಳಿಸಿದೆ.

ಹೀಗಾಗಿ ‘ಚಂದ್ರಯಾನ-3’ ಲ್ಯಾಂಡರ್ ಹೈಫೈ ಆಗಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ ಕೂಡ ಅತ್ಯಾಧುನಿಕ ತಂತ್ರಜ್ಞಾನವೇ ಆಗಿದ್ದು, ಇದು ವಿಕ್ರಮ್ ಲ್ಯಾಂಡರ್ ತನಗಾಗಿ ಸರಿಯಾದ ಮತ್ತು ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತದೆ. ಕ್ಯಾಮರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಎಂಬುದನ್ನು ನೋಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!