ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಿನಕ್ಕೊಂದು ಹೊಸ ರೀತಿ ಹುಡುಕಿ ಹೆಣ್ಮಕ್ಕಳ ಮೇಲೆ ನಿಯಮಗಳನ್ನು ಹೇರುತ್ತಿದೆ. ಹಿಜಾಬ್ ಧರಿಸುವುದು, ಬ್ಯೂಟಿಪಾರ್ಲರ್, ಪಾರ್ಕ್, ಹೋಟೆಲ್, ಶಾಲೆ, ಕಾಲೇಜುಗಳಿಗೆ ನಿಷೇಧ ಇದೆಲ್ಲಾ ಮುಗಿದು ಈಗ ಹೊಸ ಕಾನೂನು ಮನೆಗೂ ಬಂದಿದೆ.
ಇನ್ನು ಹೊಸದಾಗಿ ಕಟ್ಟಡಗಳ ನಿರ್ಮಾಣ ಮಾಡುವಾಗ ಮಹಿಳೆಯರಿರುವ ವಸತಿ ಕಟ್ಟಡದಲ್ಲಿ ಕಿಟಕಿಯನ್ನು ನಿರ್ಮಿಸುವುದನ್ನು ತಾಲಿಬಾನ್ ನಿಷೇಧಿಸಿದೆ.
ಮಹಿಳೆಯರ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ, ಆಸ್ತಿ ಮಾಲೀಕರಿಗೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಲಾಗಿದೆ. ಮನೆಯನ್ನು ನಿರ್ಮಿಸುವ ವ್ಯಕ್ತಿಗಳು ಮಹಿಳೆಯರಿರುವ ಅಡುಗೆ ಮನೆ, ಅಂಗಳ, ಬಾವಿ ಇತರೆ ಸ್ಥಳಗಳಲ್ಲಿ ಕಿಟಕಿಗಳನ್ನು ನಿರ್ಮಿಸಬಾರದು ಎಂದು ಹೇಳಿದೆ.
ಅಸ್ತಿತ್ವದಲ್ಲಿರುವ ಕಟ್ಟಡಗಳು ಈ ನಿರ್ದೇಶನಗಳನ್ನು ಉಲ್ಲಂಘಿಸುವ ಕಿಟಕಿ ಹೊಂದಿದ್ದರೆ ಮಾಲೀಕರು ಗೋಡೆಯನ್ನು ನಿರ್ಮಿಸಬೇಕು ಎಂದು ಹೇಳಿದೆ. ಹೊಸ ಕಟ್ಟಡಗಳಲ್ಲಿ ಇಂತಹ ಕಿಟಕಿಗಳನ್ನು ನಿರ್ಮಾಣ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಮೇಲ್ವಿಚಾರಣೆಗೆ ಸೂಚನೆ ನೀಡಲಾಗಿದೆ.