ಇಸ್ರೋ ಗೆ ಮತ್ತೊಂದು ಯಶಸ್ಸು: ಸೂರ್ಯನ ಮೊದಲ ಶಕ್ತಿ ಸ್ಫೋಟ ಸೆರೆಹಿಡಿದ ಆದಿತ್ಯ L1

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸೂರ್ಯನ ಅಧ್ಯಯನಕ್ಕೆ ಯಶಸ್ವಿಯಾಗಿ ಇಳಿದ ಆದಿತ್ಯ L1 ನೌಕೆಯ ಕುರಿತು ಇಸ್ರೋ ಹೊಸ ಅಪ್ ಡೇಟ್ ನೀಡಿದ್ದು, ಆದಿತ್ಯ L1 ಸೂರ್ಯನಿಂದ ಮೊದಲ ಶಕ್ತಿ ಸ್ಫೋಟವನ್ನು ಸೆರೆ ಹಿಡಿದಿದೆ.

ಆದಿತ್ಯ L1 ನೌಕೆಯಲ್ಲಿ 7 ಪ್ಲೇಲೋಡ್‌ಗಳಿವೆ. ಇದರಲ್ಲಿ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಪ್ಲೇಲೋಡ್ ಸೂರ್ಯ ಮೇಲ್ಮೈನಲ್ಲಿ ನಡೆಯುವ ಸೌರ ಜ್ವಾಲೆಗಳ ಹಠಾತ್ ಸ್ಫೋಟವನ್ನು ಸೆರೆ ಹಿಡಿದಿದೆ. ಅಕ್ಟೋಬರ್ 29 ರಂದು ಈ ಸ್ಫೋಟವನ್ನು ದಾಖಲಿಸಿದೆ.

ಸೂರ್ಯ ಮೇಲ್ಮೈನಲ್ಲಿ ಎಕ್ಸ್ ಕಿರಣಗಳ ಬೆಳಕಿನ ರೂಪದಲ್ಲಿ ಶಕ್ತಿ ಮತ್ತು ವಿಕರಣವನ್ನು ಹೊರಸೂಸುತ್ತದೆ. ಈ ವೇಳೆ ಹಠಾತ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗಳನ್ನು ಆದಿತ್ಯ ಎಲ್1 ದಾಖಲಿಸಿದೆ. ಸೂರ್ಯನ ಸುತ್ತಲಿನ ವಾತಾವರಣವರದಲ್ಲಿ ಸಂಗ್ರವಾಗಿರುವ ಕಾಂತೀಯ ಶಕ್ತಿ ಬಿಡುಗಡೆ ವೇಳೆ ಈ ರೀತಿ ಸ್ಫೋಟಗಳು ಸಂಭವಿಸುತ್ತದೆ. ಈ ಪೈಕೆ ಕೆಲವು ತೀವ್ರ ಸ್ಫೋಟವಾಗಿದ್ದರೆ, ಕೆಲವು ಸಾಮಾನ್ಯವಾಗಿರುತ್ತದೆ. ಈ ಸ್ಫೋಟದ ತೀವ್ರತೆಯನ್ನೂ ಇಸ್ರೋ ಉಪಗ್ರಹ ದಾಖಲಿಸಿದೆ.

ಸೆಪ್ಟೆಂಬರ್ 9 ರಂದು ಆದಿತ್ಯ ಎಲ್ 1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ನೆಲೆಯಿಂದ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಮೂಲಕ ಆದಿತ್ಯ ಎಲ್ 1 ನೌಕೆ ಹಾರಿಸಲಾಗಿತ್ತು. 15 ಲಕ್ಷ ಕಿಲೋಮೀಟರ್ ದೂರಕ್ಕೆ ಸಾಗಿ ಸೂರ್ಯನ ಎಲ್ 1 ಪಾಯಿಂಟ್‌ನಲ್ಲಿ ಈ ಅದಿತ್ಯ ಎಲ್ 1 ಅಧ್ಯಯನ ನಡೆಸಲಿದೆ. ಈ ದೂರ ಕ್ರಮಿಸಲು 125 ದಿನಗಳ ಅವಶ್ಯಕತೆ ಇದೆ. ಸೂರ್ಯನ ದೂರ ಭೂಮಿಯಿಂದ 15 ಕೋಟಿ ಕಿಲೋಮೀಟರ್.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!